ತುಪ್ಪದ ಮೈಸೂರ್‌ಪಾಕ್

ಮಂಗಳವಾರ, 30 ಅಕ್ಟೋಬರ್ 2018 (18:09 IST)
ಸಿಹಿ ತಿಂಡಿಯನ್ನು ಇಷ್ಟಪಡುವವರು ಮೈಸೂರ್‌ಪಾಕ್ ಅನ್ನು ಇಷ್ಟಪಟ್ಟೇ ಪಡುತ್ತಾರೆ. ಅದರೆ ಅಂಗಡಿಗಳಿಂದ ತಂದು ಮೈಸೂರ್‌ಪಾಕ್‌ ಅನ್ನು ಸವಿಯುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಅದು ಹೇಗೆ ಎಂದು ತಿಳಿಸಿಕೊಡ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ...ತಯಾರಿಸಲು 
ಬೇಕಾಗುವ ಸಾಮಗ್ರಿಗಳು :
* ಕಡಲೆಹಿಟ್ಟು 1 ಕಪ್
* ಸಕ್ಕರೆ 3 ಕಪ್
* ನೀರು 2 ಕಪ್
* ತುಪ್ಪ 2 1/2 ಕಪ್
 
ತಯಾರಿಸುವ ವಿಧಾನ :
 
ಮೊದಲು ಕಡಲೆಹಿಟ್ಟನ್ನು ಜರಡಿ ಹಿಡಿಯಬೇಕು. ಇಲ್ಲವಾದರೆ ಅದು ಗಂಟಾಗಿದ್ದರೆ ಪಾಕಕ್ಕೆ ಹಾಕಿದಾಗ ಉಂಡೆಯಾಗುತ್ತದೆ. ನಂತರ ಬಾಣಲೆಯಲ್ಲಿ ಬೆಚ್ಚಗೆ ಮಾಡಬೇಕು. ನಂತರ ಸಕ್ಕರೆ ಮತ್ತು ನೀರನ್ನು ಒಂದು ದಪ್ಪನೆಯ ಬಾಣಲೆಯಲ್ಲಿ ಹಾಕಿ ಒಂದೆಳೆ ಪಾಕವನ್ನು ಮಾಡಿಟ್ಟುಕೊಳ್ಳಬೇಕು. ನಂತರ ಈ ಪಾಕಕ್ಕೆ ಕಡಲೆಹಿಟ್ಟನ್ನು ಹಾಕಬೇಕು. ನಂತರ ಕಾಲು ಕಪ್ ತುಪ್ಪವನ್ನು ಹಾಕಿ ಚೆನ್ನಾಗಿ ತಿರುವುತ್ತಾ ಇರಬೇಕು. ಮಧ್ಯಮ ಉರಿಯಲ್ಲಿ ತಿರುವಿ 5 ನಿಮಿಷಗಳ ನಂತರ ಪುನಃ ಕಾಲು ಕಪ್ ತುಪ್ಪವನ್ನು ಹಾಕಿ ತಿರುವಬೇಕು. ಹೀಗೆ ತಿರುವುತ್ತಾ ಇರುವಾಗ ಚಂಡಿನ ರೀತಿಯಲ್ಲಿ ಅಥವಾ ಬಾಣಲೆಯಲ್ಲಿ ಬಿಡುವ ರೀತಿ ಆಗುತ್ತದೆ. ಆಗ ಉಳಿದ ಎಲ್ಲಾ ತುಪ್ಪವನ್ನು ಹಾಕಬೇಕು. ಮೈಸೂರ್‌ಪಾಕ್ ತಟ್ಟೆಗೆ ಬಟರ್ ಪೇಪರ್ ಅನ್ನು ಹಾಕಿ ರೆಡಿಯಾದ ಮಿಶ್ರಣವನ್ನು ಹಾಕಿ ಸಮತಟ್ಟಾಗಿ ತಟ್ಟಬೇಕು. ನಂತರ 1 ನಿಮಿಷ ಬಿಟ್ಟು ಉದ್ದುದ್ದಾಗಿ ಕತ್ತರಿಸಬೇಕು. ಈಗ ತುಪ್ಪದ ಮೈಸೂರ್‌ಪಾಕ್ ಸವಿಯಲು ಸಿದ್ಧ, 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ