ಬೆಣ್ಣೆಹಣ್ಣಿನ ಮಿಲ್ಕ್ ಶೇಕ್

ಶನಿವಾರ, 15 ನವೆಂಬರ್ 2014 (15:48 IST)
ಬೇಕಾಗುವ ಸಾಮಗ್ರಿ: ಒಂದು ಬೆಣ್ಣೆಹಣ್ಣು, ಒಂದು ಲೋಟ ಹಾಲು, ಸಕ್ಕರೆ.
ಮಾಡುವ ವಿಧಾನ: ಚೆನ್ನಾಗಿ ಹಣ್ಣಾದ ಒಂದು ಹಣ್ಣನ್ನು ತೊಳೆದು, ಸಿಪ್ಪೆ ಮತ್ತು ಬೀಜ ತೆಗೆದು, ಕತ್ತರಿಸಿ. ಕತ್ತರಿಸಿದ ಬೆಣ್ಣೆಹಣ್ಣಿನ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಸಕ್ಕರೆ, ಹಾಲು ಹಾಕಿ ಮತ್ತೊಮ್ಮೆ ತಿರುಗಿಸಿ. ಈಗ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ಸಿದ್ಧ.

ವೆಬ್ದುನಿಯಾವನ್ನು ಓದಿ