ಪಾಲಕ್ ಎಲೆಯ ಪಕೋಡಾ

ಮಂಗಳವಾರ, 25 ಸೆಪ್ಟಂಬರ್ 2018 (13:32 IST)
ಬೇಕಾಗುವ ಸಾಮಗ್ರಿ :
ಬಿಡಿಸಿದ ಪಾಲಾಕ್ ಎಲೆ 10
ಕಡಲೆ ಹಿಟ್ಟು 1 ಕಪ್
ಜೀರಿಗೆ -1 ಟೇಬಲ್ ಚಮಚ 
ಅಕ್ಕಿ ಹಿಟ್ಟು-2 ಚಮಚ
ನೀರು (ಅಗತ್ಯವಿರುವಷ್ಟು)
ಎಣ್ಣೆ
ಉಪ್ಪು (ರುಚಿಗೆ ತಕ್ಕಷ್ಟು)
ಅಚ್ಚು ಖಾರದ ಪುಡಿ 2 ಚಮಚ
ಪಾಲಾಕ್ ಪಕೋಡಾ ಮಾಡುವ ವಿಧಾನ
 
ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ. ನಂತರ ಒಂದು ಬೌಲ್‌ನಲ್ಲಿ ಕಡಲೆಹಿಟ್ಟು, ಜೀರಿಗೆ ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ. ಅದಕ್ಕೆ ಎಷ್ಟು ಬೇಕೊ ಅಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿಕೊಳ್ಳಿ. (ಒಂದು ವೇಳೆ ನಿಮಗೆ ಪಕೋಡಾ ಗರಿಗರಿಯಾಗಿರಬೇಕು ಎಂದು ಬಯಸುವುದಾದಲ್ಲಿ ಮಿಶ್ರಣಕ್ಕೆ ಸ್ವಲ್ಪ ಬಿಸಿ ಎಣ್ಣೆ ಮತ್ತು ಅಕ್ಕಿ ಹಿಟ್ಟು ಸೇರಿಸಬೇಕಾಗುತ್ತದೆ)  ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಿ ಎಣ್ಣೆ ಬಿಸಿಯಾದ ಮೇಲೆ ಪಾಲಕ್ ಎಲೆಯನ್ನು ಮಿಶ್ರಣದಲ್ಲಿ ಅದ್ದಿ ಖಾದಿರುವ ಎಣ್ಣೆಯಲ್ಲಿ ಬಿಡಿ. ನಂತರ ಅದನ್ನು ಎರಡು ಬದಿಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ ಹೀಗೆ ಮಾಡಿದರೆ ಬಿಸಿ ಬಿಸಿ ಪಾಲಾಕ್ ಎಲೆಯ ಪಕೋಡಾ ರೆಡಿ.
 
ಇದು ಟೊಮೆಟೊ ಸಾಸ್‌ನೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ