ಹಳ್ಳಿಯಲ್ಲಿ ಮುದ್ದೆಯ ಜೊತೆ ತುಂಬಾ ಇಷ್ಟವಾಗುವಂತಹ ರೆಸಿಪಿ. ಇದು ಕೇವಲ ಕೆಲವೇ ವರ್ಗಕ್ಕೆ ಇಷ್ಟವಾಗುವಂತಹದ್ದಲ್ಲ.
ತುಂಬಾ ಸಿಂಪಲ್ ರೆಸಿಪಿ ಎಲ್ಲರು ಇಷ್ಟಪಡುತ್ತಾರೆ. ಬಾಯಿಗೆ ಮರೆಯಲಾಗದಂತಹ ಅಡುಗೆ. ಇಂದು ನಾವು ಹೇಳಿಕೊಡುತ್ತಿರುವ ಸಾರಿನ ಹೆಸರು ಹಸಿ ಕೈ ಗೊಜ್ಜು.
ಈ ಸಾರನ್ನು ಮುದ್ದೆ, ಅನ್ನದ ಜೊತೆ ಸವಿದರೆ ಬಹಳ ರುಚಿಯಾಗಿರುತ್ತೆ. ಸಿಟಿಯಲ್ಲೆ ಇದ್ದವರಿಗೆ ಈ ಸಾರಿನ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅದಕ್ಕೆ ಇಂದು ನೀವು ನಿಮ್ಮ ಮನೆಯಲ್ಲಿ ಹಸಿ ಕೈ ಗೊಜ್ಜು ಟ್ರೈ ಮಾಡಿ ರುಚಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ.
* ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ.
* ಬದನೆಕಾಯಿಯನ್ನು ಚಾಕುವಿನಿಂದ ಚುಚ್ಚಿ ಅದನ್ನು ಗ್ಯಾಸ್ ಉರಿಯಲ್ಲಿ ಬೇಯಿಸಿ. ಅದೇ ರೀತಿ ಟೊಮೆಟೊ ಮತ್ತು ಮೆಣಸಿನಕಾಯಿಯನ್ನು ಬೇಯಿಸಿ ಪಕ್ಕಕ್ಕೆ ಇಡಿ.
* ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಟೊಮೆಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಫ್ರೈ ಮಾಡಿ.
* ಈಗ ಫ್ರೈಗೆ ಈರುಳ್ಳಿ, ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.