ಪ್ರೋಟೀನ್ ಅಷ್ಟೇ ಅಲ್ಲ , ರುಚಿಯಲ್ಲಿಯೂ ಚೆನ್ನ ನೀವೂ ರುಚಿ ನೋಡಿ
ಮಂಗಳವಾರ, 23 ಆಗಸ್ಟ್ 2022 (13:12 IST)
ಸೋಯಾ ಬೀನ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಎಲ್ಲಾ ವಯಸ್ಸಿನವರಿಗೂ ಈ ರುಚಿ ಇಷ್ಟ ಆಗುವಾಗುತ್ತದೆ.
ಸೋಯಾದಲ್ಲಿ ಹೆಚ್ಚು ಪ್ರೋಟೀನ್ ಇದ್ದು, ಜನರಿಗೆ ಬೇಕಾದ ಪೋಷಕಾಂಶವನ್ನು ಉತ್ತಮವಾಗಿ ನೀಡುತ್ತೆ.
ಅದಕ್ಕೆ ಇಂದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಬಾಯಿ ರುಚಿಗೂ ಸಿಗಬೇಕು ಎಂದು ಸೋಯಾ ಕರಿ ಮಾಡುವುದನ್ನು ಹೇಳಿಕೊಡುತ್ತಿದ್ದೇವೆ. ಈ ವಿಧಾನವನ್ನು ಓದಿ ಹೇಗೆ ಸೋಯಾ ಕರಿ ಮಾಡಬಹುದು ಎಂದು ತಿಳಿದುಕೊಳ್ಳಿ.
ಬೇಕಾಗಿರುವ ಪದಾರ್ಥಗಳು
* ಸೋಯಾ – 2 ಕಪ್
* ಸಾಸಿವೆ ಎಣ್ಣೆ – ಅರ್ಧ ಟೀಸ್ಪೂನ್
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ರುಚುಗೆ ತಕ್ಕಷ್ಟು ಉಪ್ಪು
* ಕಟ್ ಮಾಡಿದ ಈರುಳ್ಳಿ – 1 ಕಪ್
* ಕಟ್ ಮಾಡಿದ ಟೊಮೆಟೊ – 1 ಕಪ್
* ಹಸಿರು ಮೆಣಸಿನಕಾಯಿ – 2
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
* ಸೋಯಾ ಬೀನ್ಸ್ಗಳನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಸೋಯಾ ಬೀನ್ಸ್ ಸೋಸಿ ತಣ್ಣಗಾಗುವವರೆಗೂ ಬಿಡಿ. ಸೋಯಾದಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿ. ಪಕ್ಕಕ್ಕೆ ಹಿಡಿ.
* ಒಂದು ಜಾರಿಗೆ ಕಟ್ ಮಾಡಿದ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿಗಳು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ಗಳನ್ನು ಹಾಕಿ ನಯವಾದ ಪೇಸ್ಟ್ ಮಾಡಿ.
* ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಮಸಾಲಾ ಪೇಸ್ಟ್ ನಿಧಾನವಾಗಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.
* ನಂತರ ಅದಕ್ಕೆ ಕೆಂಪುಮೆಣಸು, ಅರಿಶಿನ ಪುಡಿ, ಜೀರಿಗೆ ಪುಡಿ, ದಾನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಫ್ರೈ ಮಾಡಿ. ನಂತರ ಎಣ್ಣೆಯು ಪಾತ್ರೆಯ ಬದಿಗಳನ್ನು ಬಿಡುವವರೆಗೆ ಚೆನ್ನಾಗಿ ಫ್ರೈ ಮಾಡಿ.
* ಈಗ, ನೆನೆಸಿದ ಮತ್ತು ಹಿಂಡಿದ ಸೋಯಾ ತುಂಡುಗಳನ್ನು ಮಸಾಲೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 2-3 ನಿಮಿಷಗಳ ಕಾಲ ಎಲ್ಲವನ್ನೂ ಫ್ರೈ ಮಾಡಿ.
* ಅದಕ್ಕೆ 1.5 ಕಪ್ ನೀರನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ. 5 ನಿಮಿಷ ಬಿಡಿ.