ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಚಟ್ನಿ ಮಾಡುವುದು ಹೇಗೆ ಗೊತ್ತಾ?

ಸೋಮವಾರ, 1 ಜೂನ್ 2020 (08:37 IST)
Normal 0 false false false EN-US X-NONE X-NONE

ಬೆಂಗಳೂರು : ಕಲ್ಲಂಗಡಿ ಹಣ್ಣಿನ ಸಿಪ್ಪೆ ವೆಸ್ಟ್ ಅಂತ ಎಸೆಯುತ್ತೇವೆ. ಆದರೆ ಅದರಲ್ಲಿ ತುಂಬಾ ಆರೋಗ್ಯಕಾರಕ ಅಂಶಗಳಿವೆ. ಆದಕಾರಣ ಅದರಿಂದ ಚಟ್ನಿ ತಯಾರಿಸಿ ತಿಂದರೆ ತುಂಬಾ ಒಳ್ಳೆಯದು.

 

ಬೇಕಾಗುವ ಸಾಮಾಗ್ರಿ : 1 ಚಮಚ ಉದ್ದಿನಬೇಳೆ, 2 ಚಮಚ ಕಡಲೆಬೇಳೆ, 2 ಚಮಚ ಶೇಂಗಾ, 1 ಚಮಚ ಜೀರಿಗೆ, 1 ಹಿಡಿ ಹಸಿಮೆಣಸಿನಕಾಯಿ. ½ ಕಲ್ಲಂಗಡಿ ಹಣ್ಣಿನ ಸಿಪ್ಪೆ, 2 ಟೊಮೆಟೊ,  ಹುಣಸೆ ಹಣ್ಣು, ಎಣ್ಣೆ.  

 

ಮಾಡುವ ವಿಧಾನ: ಒಂದು ಬಾಣಲೆ ಬಿಸಿ ಮಾಡಿ ಅದಕ್ಕೆ 1 ಚಮಚ ಉದ್ದಿನಬೇಳೆ, 2 ಚಮಚ ಕಡಲೆಬೇಳೆ, 2 ಚಮಚ ಶೇಂಗಾ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಅದಕ್ಕೆ 1 ಚಮಚ ಜೀರಿಗೆ ಹಾಕಿ ಹುರಿಯಿರಿ. ನಂತರ ಅದನ್ನು ಪುಡಿಮಾಡಿಕೊಳ್ಳಿ. ಬಳಿಕ ಇನ್ನೊಂದು ಬಾಣಲೆಯಲ್ಲಿ  ಎಣ್ಣೆ ಹಾಕಿ 1 ಹಿಡಿ ಹಸಿಮೆಣಸಿನಕಾಯಿ ಮತ್ತು ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಕಟ್ ಮಾಡಿ ಹಾಕಿ ಚೆನ್ನಾಗಿ 15-20 ನಿಮಿಷ ಪ್ರೈ ಮಾಡಿ. ಬಳಿಕ ಅದಕ್ಕೆ 2 ಟೊಮೆಟೊ ಹಾಗೂ ಹುಣಸೆ ಹಣ್ಣಿನ ರಸ ಹಾಕಿ ಮತ್ತೆ ಪ್ರೈ ಮಾಡಿ. ಬಳಿಕ ಇದನ್ನು ಮಿಕ್ಸಿಗೆ ಹಾಕಿ ಅದಕ್ಕೆ ಪುಡಿಮಾಡಿಕೊಂಡ ಮಿಶ್ರಣವನ್ನು, ಉಪ್ಪನ್ನು ಹಾಕಿ ರುಬ್ಬಿ. ಬಳಿಕ ಇದಕ್ಕೆ ಒಗ್ಗರಣೆ ಹಾಕಿದರೆ ಕಲ್ಲಂಗಡಿ ಹಣ್ಣಿನ ಚಟ್ನಿ ರೆಡಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ