ಕೊಬ್ಬರಿ ಅನ್ನ ವಿಶೇಷ ಗೊತ್ತಾ?
ಮಂಗಳವಾರ, 2 ಜೂನ್ 2020 (19:39 IST)
ಮೊಸರನ್ನ, ಚಿತ್ರಾನ್ನ ಇನ್ನಿತರ ಬಗೆ ಬಗೆ ಖಾದ್ಯಗಳು ನಿಮಗೆ ಗೊತ್ತು. ಆದರೆ ಕೊಬ್ಬರಿ ಅನ್ನ ವಿಶೇಷವಾಗಿ ಮಾಡಿದ್ದೀರಾ? ಇಲ್ಲಾಂದ್ರೆ ಈಗಲೇ ಟ್ರೈ ಮಾಡಿ.
ಏನೆಲ್ಲಾ ಬೇಕು?
ತೆಂಗಿನಕಾಯಿ 1
ಉದ್ದಿನ ಬೇಳೆ
ಸಾಸಿವೆ
ಅಕ್ಕಿ 4 ಕಪ್
ಒಣಮೆನಸಿನಕಾಯಿ 4
ತುಪ್ಪ
ಇಂಗು
ಅರಿಶಿನಪುಡಿ
ಉಪ್ಪು
ಮಾಡೋದು ಹೇಗೆ?: ಉದುರು ಅನ್ನ ಮಾಡಿ. ತುಪ್ಪ ಹಾಕಿ ಒಗ್ಗರಣೆ ಕೊಡಿ. ಉದ್ದಿನ ಬೇಳೆ, ಸಾಸಿವೆ, ಒಣಮೆಣಸಿನಕಾಯಿ ತುಂಡು, ಕರಿಬೇವು, ಹಸಿಕೊಬ್ಬರಿ ತುರಿಯನ್ನು ಒಗ್ಗರಣೆಯಲ್ಲಿ ಮಿಕ್ಸ್ ಮಾಡಬೇಕು. ಹುರಿದುಕೊಂಡು ಅದಕ್ಕೆ ಅರಿಶಿನಪುಡಿ, ಉಪ್ಪು, ಅನ್ನ ಹಾಕಿ ಸ್ವಲ್ಪ ಬೇಯಿಸಿದರೆ ಕೊಬ್ಬರಿ ಅನ್ನ ರೆಡಿ.