ಪಾಲಾಕ್ ಸೊಪ್ಪಿನ ಚಕ್ಕುಲಿ

ಗುರುವಾರ, 11 ಅಕ್ಟೋಬರ್ 2018 (15:01 IST)
ಹಬ್ಬ ಹರಿದಿನಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುವುದು ಚಕ್ಕುಲಿ. ಚಕ್ಕುಲಿಯು ವಾರದವರೆಗೆ ಕೆಡದಂತೆ ಇರುತ್ತದೆ. ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರೂ ಇಷ್ಟಪಟ್ಟು ತಿನ್ನುತ್ತಾರೆ. ಅಂತಹುದರಲ್ಲಿ ಪಾಲಾಕ್ ಸೊಪ್ಪಿನಿಂದ ರುಚಿಕರವಾದ ಚಕ್ಕುಲಿಯನ್ನು ಮನೆಯಲ್ಲಿಯೇ ತಯಾರಿಸಬಹುದು. 
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 2 ಕಪ್ ಅಕ್ಕಿ
* ಪಾಲಾಕ್ ಸೊಪ್ಪು
* 2 ಹಸಿಮೆಣಸು
* 1/2 ಕಪ್ ಕಡಲೆಹಿಟ್ಟು
* 2 ಚಮಚ ಹುರಿಗಡಲೆಪುಡಿ
* 1/2 ಚಮಚ ಜೀರಿಗೆ
* ಇಂಗು ಚಿಟಿಕೆಯಷ್ಟು
* 1 ಚಮಚ ಬೆಣ್ಣೆ
* 1 ಚಮಚ ಎಳ್ಳು
* 1/4 ಕಪ್ ನೀರು
* ಕರಿಯಲು ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
 ಮೊದಲು ಒಂದು ಹಿಡಿಯಷ್ಟು ಪಾಲಾಕ್ ಸೊಪ್ನನ್ನು ಹಸಿಮೆಣಸು ಮತ್ತು ಕಾಲು ಕಪ್ ನೀರು ಹಾಕಿ ರುಬ್ಬಿಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಕಡಲೆಹಿಟ್ಟು, ಹುರಿಗಡಲೆ ಪುಡಿ, ಜೀರಿಗೆ, ಎಳ್ಳು, ಇಂಗು ಮತ್ತು ಉಪ್ಪನ್ನು ಹಾಕಿ ಬೆಣ್ಣೆಯನ್ನು ಬಿಸಿ ಮಾಡಿ ಆ ಪಾತ್ರೆಗೆ ಹಾಕಬೇಕು. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈಗಾಗಲೇ ರುಬ್ಬಿಕೊಂಡ ಪಾಲಾಕ್ ಸೊಪ್ಪನ್ನು ಹಾಕಿ ಕಲೆಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಂಡು ಅದನ್ನು ಚೆನ್ನಾಗಿ ನಾದಬೇಕು. ನಂತರ ಚಕ್ಕುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಒಂದು ತಟ್ಟೆಯಿಂದ ಅದನ್ನು ಒತ್ತಬೇಕು. ನಂತರ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಬೇಕು. ನಂತರ ಒತ್ತಿಕೊಂಡ ಚಕ್ಕುಲಿಯನ್ನು ಹಾಕಿ ಎರಡೂ ಬದಿಯಲ್ಲಿ ಗರಿಗರಿಯಾಗಿ ಕರಿದರೆ ರುಚಿಯಾದ ಪಾಲಾಕ್ ಸೊಪ್ಪು ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ