ಮೊದಲು 2 ಕಪ್ ಹೆಸರುಕಾಳು, 1 ಕಪ್ ಅಕ್ಕಿ, 1 ಕಪ್ ಉದ್ದಿನಬೇಳೆ ಮತ್ತು 2 ಚಮಚ ಮೆಂತ್ಯೆ ಕಾಳು ಇವುಗಳನ್ನು 10 ರಿಂದ 12 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಅದನ್ನು ನುಣ್ಣಗೆ ರುಬ್ಬಬೇಕು. ನಂತರ 2 ಈರುಳ್ಳಿ, ಹಸಿಮೆಣಸಿನಕಾಯಿ, ಮೆಂತ್ಯೆಸೊಪ್ಪು, 1 ಚಮಚ ಜೀರಿಗೆ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ ರುಬ್ಬಿಕೊಂಡು ಈಗಾಗಲೇ ರುಬ್ಬಿಕೊಂಡ ದೋಸೆ ಹಿಟ್ಟಿಗೆ ಸೇರಿಸಬೇಕು. ಈ ಮಿಶ್ರಣವನ್ನು ಹುದುಗಲು ಬಿಡಬೇಕೆಂದೇನಿಲ್ಲ. ನಂತರ ಇದಕ್ಕೆ 1 ಚಮಚ ಅಂದರೆ 5 ಗ್ರಾಂ ENO ಸೇರಿಸಿ 5 ನಿಮಿಷ ಬಿಟ್ಟು ದೋಸೆ ಎರೆದರೆ ಗರಿಗರಿಯಾದ ಪ್ರೋಟೀನ್ ದೋಸೆ ಸವಿಯಲು ಸಿದ್ಧ.