ಮನೆಯಲ್ಲಿ ಅನ್ನ ಉಳಿದಿದೆಯೇ...? ಹಾಗಾದ್ರೆ ಸುಲಭವಾಗಿ ಈ ರುಚಿಕರ ವಡೆ ತಯಾರಿಸಿ

ಶುಕ್ರವಾರ, 12 ಜನವರಿ 2018 (15:33 IST)
ಬೆಂಗಳೂರು : ಮನೆಯಲ್ಲಿ ಮಾಡಿದ ಅನ್ನದಲ್ಲಿ ಕೆಲವೊಮ್ಮೆ ಸ್ವಲ್ಪ ಉಳಿದಿರುತ್ತದೆ. ಆಗ ಅದನ್ನು ಎಸೆಯಲು ಮನಸ್ಸಾಗದೆ ಏನು ಮಾಡುವುದು ಎಂದು ಯೋಚಿಸುತ್ತಾರೆ. ಅಂತವರಿಗೆ ಇಲ್ಲಿದೆ ಒಂದು ಪರಿಹಾರ. ಉಳಿದಿರುವ ಅನ್ನದಿಂದ ರುಚಿಕರವಾದ ವಡೆ ತಯಾರಿಸಬಹುದು.

 
ಬೇಕಾಗಿರುವ ಸಾಮಾಗ್ರಿಗಳು : ಉಳಿದಿರುವ ಅನ್ನ 1 ಕಪ್, ಕಡಲೆಹಿಟ್ಟು 3-5 ಟೇಬಲ್ ಸ್ಪೂನ್, ಜೀರಿಗೆ ಪುಡಿ 2 ಚಿಟಿಕೆ, ಇಂಗು 1 ಚಿಟಿಕೆ, ಸಣ್ಣಗೆ ಹೆಚ್ಚಿದ ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ(ಬೇಕಾದಲ್ಲಿ ಮಾತ್ರ), ಶುಂಠಿಬೆಳ್ಳುಳ್ಳಿ ಪೇಸ್ಟ್ ¼ ಚಮಚ, ಸಣ್ಣಗೆ ಹೆಚ್ಚಿದ 1 ಈರುಳ್ಳಿ, ಕರಿಬೇವು, ಎಣ್ಣೆ, ಉಪ್ಪು.

 
ಮಾಡುವ ವಿಧಾನ : ಮೇಲೆ ಹೇಳಿರುವ ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ರುಚಿಗೆ ತಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ನಂತರ ಸ್ವಲ್ಪ ನೀರನ್ನು ಹಾಕಿ ವಡೆಹಿಟ್ಟಿನ  ಹದಕ್ಕೆ ಕಲಸಿ. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸ್ವಲ್ಪ ಹಿಟ್ಟನ್ನುತೆಗೆದುಕೊಂಡು ವಡೆ ಆಕಾರದಲ್ಲಿ ತಟ್ಟಿ ಎಣ್ಣೆಗೆ ಬಿಟ್ಟು  ಚೆನ್ನಾಗಿ ಬೇಯುವ ತನಕ ಕರಿಯಿರಿ. ಅದು ಕೆಂಪಗಾದ ಮೇಲೆ ತೆಗೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ