ಬಾಯಲ್ಲಿ ನೀರೂರಿಸುತ್ತೆ ಈ ಉಪ್ಪಿನಕಾಯಿ

ಗುರುವಾರ, 24 ಅಕ್ಟೋಬರ್ 2019 (09:06 IST)
ಬೆಂಗಳೂರು : ಮಾವಿನ ಕಾಯಿ ಉಪ್ಪಿನಕಾಯಿ ಎಲ್ಲರೂ ಇಷ್ಟಪಡುತ್ತಾರೆ. ಹಾಗೇ ಚಿಕನ್ ನಿಂದ ಕೂಡ ಉಪ್ಪಿನ ಕಾಯಿ ತಯಾರಿಸಬಹುದು. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ.




ಬೇಕಾಗುವ ಸಾಮಾಗ್ರಿಗಳು:
½ ಕೆಜಿ ಚಿಕನ್, ಎಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿನ 1 ಚಮಚ, ಕೆಂಪು ಮೆಣಸಿನ ಪುಡಿ 1 ಚಮಚ, ಉಪ್ಪು, ದನಿಯಾ ಪುಡಿ 1ಚಮಚ, ಕೊತ್ತಂಬರಿ ಸೊಪ್ಪು, ಕರಿಬೇವು, ಗರಂ ಮಸಾಲ ಪುಡಿ 1 ಚಮಚ, ಬೆಳ್ಳುಳ್ಳಿ ಎಸಳು 4, ಜೀರಿಗೆ 1 ಚಮಚ, ಸಾಸಿವೆ.
ಮಾಡುವ ವಿಧಾನ :


ಮೊದಲಿಗೆ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ತೊಳೆದಿಟ್ಟುಕೊಂಡ ಚಿಕನ್ ,ಉಪ್ಪು ಮತ್ತು ಅರಶಿನ ಹಾಕಿ ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಕರಿದು ಬೇರೆ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಬಳಿಕ ಮತ್ತೆ ಬಾಣಲೆಯಲ್ಲಿ ಎಣ್ಣೆ  ಬಿಸಿ ಮಾಡಿಕೊಂಡು ಅದಕ್ಕೆ  ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ದನಿಯಾ ಪುಡಿ, ಗರಂ ಮಸಾಲ ಪುಡಿ, ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕರಿದು ಚಿಕನ್ ಜೊತೆ ಮಿಕ್ಸ್ ಮಾಡಿ. ಬಳಿಕ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಬೆಳ್ಳುಳ್ಳಿ ಎಸಳು, ಜೀರಿಗೆ, ಸಾಸಿವೆ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ ಒಗ್ಗರಣೆ ಹಾಕಿ ಅದನ್ನು ಚಿಕನ್ ಜೊತೆ ಸೇರಿಸಿದರೆ ಚಿಕನ್ ಉಪ್ಪಿನಕಾಯಿ ರೆಡಿ. ಇದು ಚಪ್ಪಾತಿ, ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ