ಆರೋಗ್ಯಕರ ಜೋಳ ಬಳಸಿ ದೋಸೆ ಮಾಡಿ

ಶನಿವಾರ, 28 ಜನವರಿ 2017 (11:56 IST)
ಬೆಂಗಳೂರು:  ಬೀದಿ ಬದಿ ನಿಂತು ಕೊಂಡು ಸುಟ್ಟ ಜೋಳ ತಿನ್ನುವುದರಲ್ಲಿ ಅದೇನೋ ಮಜಾ ಇದೆ. ಜೋಳ ಆರೋಗ್ಯಕರ ಆಹಾರ ವಸ್ತು. ಇದನ್ನು ಬಳಸಿ ದೋಸೆ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಜೋಳ
ಬೆಳ್ತಿಗೆ ಅಕ್ಕಿ
ಉಪ್ಪು

ಮಾಡುವ ವಿಧಾನ

ಹಸಿ ಜೋಳದ ಬೀಜ ತೆಗೆದಿಟ್ಟುಕೊಳ್ಳಿ. ನೆನೆಸಿದ ಅಕ್ಕಿಯೊಂದಿಗೆ ಜೋಳದ ಕಾಳನ್ನು ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿಕೊಂಡಾಗ ಕಸದಂತೆ ಗಂಟು ಸಿಕ್ಕಿಕೊಳ್ಳಬಹುದು. ಇದನ್ನು ಬೇರ್ಪಡಿಸಿ ಹಿಟ್ಟು ರೆಡಿ ಮಾಡಿಕೊಳ್ಳಿ. ಕಾದ ಕಾವಲಿ ಮೇಲೆ ಈ ಹಿಟ್ಟನ್ನು ಹುಯ್ಯಿದುಕೊಂಡರೆ ಜೋಳದ ದೋಸೆ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ