ಹೋಳಿಗೆ ಸಾರು ಮಾಡುವುದು ಹೇಗೆ ಗೊತ್ತಾ?

ಬುಧವಾರ, 10 ಅಕ್ಟೋಬರ್ 2018 (13:46 IST)
ಬೇಕಾಗುವ ಸಾಮಗ್ರಿಗಳು:
 
ಅರಿಶಿನ: 1 ಚಿಟಿಕೆ
ಸಾರಿನ ಪುಡಿ: 1-1/2 ಚಮಚ
ಹುಣಿಸೆ ರಸ : 1/4 ಲೋಟ
ಎಣ್ಣೆ: 1 ಚಮಚ
ಬೇಳೆ ಬೇಯಿಸಿದ ನೀರು : 4 ಲೋಟ
ಟೊಮ್ಯಾಟೋ: 2
ಬೆಳ್ಳುಳ್ಳಿ: 2-3 ಎಸಳು
ಉಪ್ಪು: ರುಚಿಗೆ ತಕ್ಕಶ್ಟು
ಹೋಳಿಗೆ ಹೂರಣ: 2-3 ಚಮಚ
ಸಾಸಿವೆ: 1/2 ಚಮಚ
ಜೀರಿಗೆ: 1/4 ಚಮಚ
ಕರಿಬೇವು
ಕೊತ್ತಂಬರಿ ಸೊಪ್ಪು
 
ಮಾಡುವ ಬಗೆ:
 
1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಒಗ್ಗರಣೆ ಮಾಡಿ
 
2. ಬೆಳ್ಳುಳ್ಳಿ , ಕರಿಬೇವು ಹಾಕಿ ಕರಿಯಿರಿ
 
3. ಹೆಚ್ಚಿದ ಟೊಮ್ಯಾಟೋ ಹಾಕಿ 2 ನಿಮಿಷ ಬೇಯಿಸಿ
 
4. ಉಪ್ಪು, ಸಾರಿನ ಪುಡಿ, ಹೋಳಿಗೆ ಹೂರಣ, ಹುಣಿಸೆ ರಸ ಸೇರಿಸಿ ಕುದಿಸಿ.
 
5. ಬೇಳೆ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಅನ್ನದೊಂದಿಗೆ ಸವಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ