ಮನೆಯಲ್ಲಿ ಮಾಡಿ ಗೋಡಂಬಿ ಬರ್ಫಿ

ಬುಧವಾರ, 17 ಜೂನ್ 2020 (17:00 IST)
ಗೋಡಂಬಿ ಎಲ್ಲರಿಗೂ ಅಚ್ಚುಮೆಚ್ಚು. ಬರ್ಫಿ ಹಲವರ ಫೇವರಿಟ್. ಗೋಡಂಬಿ ಬರ್ಫಿ ಮಾಡಿದರೆ ಎಲ್ಲರಿಗೂ ಇಷ್ಟವಾಗೋದರಲ್ಲಿ ಅನುಮಾನವಿಲ್ಲ.

ಏನೇನ್ ಬೇಕು?

ಗೋಡಂಬಿ 250 ಗ್ರಾಂ
ಸಕ್ಕರೆ      500 ಗ್ರಾಂ
ತುಪ್ಪ ಅರ್ಧ ಟೀ ಚಮಚ

ಮಾಡೋದು ಹೇಗೆ?

ಗೋಡಂಬಿ ಅರ್ಧದಷ್ಟು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದಕ್ಕೆ ಮಿಕ್ಕ ಗೋಡಂಬಿ ಚೂರು ಹಾಗೂ ಸಕ್ಕರೆ, ಏಲಕ್ಕಿ ಬೆರೆಸಿ ಪಾತ್ರೆ ಹಾಕಿ ಸಣ್ಣ ಉರಿ ಮೇಲಿಡಿ. ಸಕ್ಕರೆ ಕರಗಿ ಮಿಶ್ರಣಕ್ಕೆ ಹೊಂದಿಕೊಂಡ ನಂತರ ತುಪ್ಪ ಸೇರಿಸಿ.

ತುಪ್ಪ ಹೀರಿಕೊಂಡು ಬರ್ಫಿ ಹದಬಂದ ನಂತರ ಅದಕ್ಕೆ ಗುಲಾಬಿ ಎಸೆನ್ಸ್ ಸೇರಿಸಿ. ತುಪ್ಪ ಸವರಿದ ತಟ್ಟೆಗೆ ಸುರಿದು ಮಟ್ಟಸವಾಗಿ ತಟ್ಟಿ ಬೆಳ್ಳಿವರ್ತಿಯನ್ನು ಅದರ ಮೇಲೊತ್ತಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ