ಸಬ್ಬಕ್ಕಿ ಸಂಡಿಗೆ ಮಾಡಿ ನೋಡಿ

ಮಂಗಳವಾರ, 16 ಜೂನ್ 2020 (19:42 IST)
ಸಬ್ಬಕ್ಕಿ ಎಂದರೆ ಎಲ್ಲರಿಗೂ ಇಷ್ಟವಾಗುವಂಥದ್ದೇ. ಮನೆಯಲ್ಲೇ ಇರುವ ಸಬ್ಬಕ್ಕಿಯಿಂದ ಸಂಡಿಗೆ ಮಾಡಿ ವಿಶೇಷವಾಗಿರುವ ರುಚಿ ನೋಡಿ.

ಏನೇನು ಬೇಕು?

ಸಬ್ಬಕ್ಕಿ ಅರ್ಧ ಕಿಲೋ
ಹಸಿಮೆಣಸಿನಕಾಯಿ 100 ಗ್ರಾಂ
ಕೊತ್ತಂಬರಿ ಒಂದು ಕಂತೆ
ಜೀರಿಗೆ 25 ಗ್ರಾಂ
ಉಪ್ಪು

ಮಾಡುವುದು ಹೇಗೆ?

ಚೆನ್ನಾಗಿ ನೀರಿನಲ್ಲಿ ಸಬ್ಬಕ್ಕಿ ಬೇಯಿಸಿ. ಚೆನ್ನಾಗಿ ಬೇಯುವಾಗ ಉಪ್ಪು, ಹೆಚ್ಚಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕುಟ್ಟಿದ ಜೀರಿಗೆ ಹಾಕಿ ಮಿಶ್ರಣ ಮಾಡಿ.
ಮಿಶ್ರಣ ಅಂಟು ಬರುವತನಕ ಮಾಡುತ್ತಿರಬೇಕು. ಆಮೇಲೆ ಕೆಳಗೆ ಇಳಿಸಿ, ಆರಿದ ಮೇಲೆ ಪ್ಲಾಸ್ಟಿಕ್ ಪೇಪರ್ ಮೇಲೆ ಸಂಡಿಗೆ ಹಾಕಿ. ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬೇಕಾದಾಗ ಎಣ್ಣೆಯಲ್ಲಿ ಕರೆದುಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ