ಎಳೆ ಹಲಸಿನ ಕಾಯಿ ಪಲ್ಯ

ಭಾನುವಾರ, 2 ಆಗಸ್ಟ್ 2020 (08:29 IST)
ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದರ ಎಳೆಕಾಯಿಯಿಂದಲೂ ಅಡುಗೆ ತಯಾರಿಸಬಹುದು. ಅದು ಹೇಗೆ ಎಂಬುದನ್ನು ನೋಡೋಣ.

ಬೇಕಾಗುವ ಸಾಮಾಗ್ರಿಗಳು : 1 ಎಳೆ ಹಲಸಿನ ಕಾಯಿ, ನೆನೆಸಿದ ಕಡಲೆಕಾಳು 1 ಕಪ್, ಅಚ್ಚಖಾರದ ಪುಡಿ 4 ಚಮಚ, ಈರುಳ್ಳಿ 1, ಬೆಳ್ಳುಳ್ಳಿ12 ಎಸಳು, ಟೊಮೆಟೊ 1,  ತೆಂಗಿನಕಾಯಿ ತುರಿ ½  ಕಪ್, ಜೀರಿಗೆ ಪುಡಿ ½ ಟೀ ಚಮಚ, ಅರಶಿನ 1 ಚಿಟಿಕೆ, ದನಿಯಾ ಪುಡಿ ½  ಚಮಚ, ಎಣ್ಣೆ 1 ಚಮಚ, ಹುಣಸೆ ಹಣ್ಣು , ಉಪ್ಪು.

ಮಾಡುವ ವಿಧಾನ : ಎಳೆಯ ಹಲಸಿನ ಕಾಯಿ ಯನ್ನು ಸಿಪ್ಪೆ ತೆಗೆದು ಉದ್ದಕ್ಕೆ ಹೆಚ್ಚಿಕೊಂಡು ಕುಕ್ಕರ್ ಗೆ ಹಾಕಿ ಅದಕ್ಕೆ ಸ್ವಲ್ಪ ನೀರು, 2 ಟೀ ಚಮಚ ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಗೂ ಹುಣಸೆ ಹಣ್ಣನ್ನು ಹಾಕಿ ಒಂದು ಅಥವಾ ಎರಡು ವಿಶಲ್ ಹಾಕಿ.

ಒಂದು ಬಾಣಲೆಗೆ ಸ್ವಲ್ಪ ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಹಾಕಿ ಬೇಯಿಸಿ. ನಂತರ ಖಾರದ ಪುಡಿ, ಚಿಟಿಕೆ ಅರಶಿನ ಹಾಕಿ ಬೇಯಿಸಿ ಇಟ್ಟುಕೊಂಡ ಹಲಸಿನ ಕಾಯಿ ಹಾಗೂ ಬೇಯಿಸಿದ ಕಡಲೆಕಾಳು, ಉಪ್ಪು ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ತುರಿದ ತೆಂಗಿನಕಾಯಿ ಹಾಕಿ ತಿರುವಿ ಸ್ವಲ್ಪ ಹೊತ್ತು ಬಿಸಿ ಮಾಡಿ ಉರಿಯಿಂದ ಕೆಳಗಿಳಿಸಿದರೆ ರುಚಿಯಾದ ಎಳೆ ಹಲಸಿನ ಕಾಯಿ ಪಲ್ಯ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ