ಬಂಗಡೆ ಮೀನಿನ ಪುಳಿಮುಂಚಿ

ಭಾನುವಾರ, 2 ಆಗಸ್ಟ್ 2020 (08:13 IST)
ಬೆಂಗಳೂರು : ಬಂಗಡೆ ಮೀನು ಎಂದರೆ ಎಲ್ಲರಿಗೂ ಇಷ್ಟ. ಈ ಬಂಗಡೆ ಮೀನಿನಿಂದ ಪುಳಿಮುಂಚಿ ಮಾಡಿ ತಿಂದರೆ ಬಹಳ ರುಚಿಕರವಾಗಿರುತ್ತದೆ. ಅದು ಮಾಡುವುದು ಹೇಗೆಂಬುದನ್ನು ನೋಡೋಣ.

ಬೇಕಾಗುವ ಸಾಮಾಗ್ರಿಗಳು : ಬಂಗಡೆ ಮೀನು  ½ ಕೆ.ಜಿ, ಒಣಮೆಣಸು  20, ಕಾಳುಮೆಣಸು 1 ಚಮಚ, ಜೀರಿಗೆ 1 ಚಮಚ, ಮೆಂತೆ ¼ ಚಮಚ,  ದನಿಯಾ 3 ಚಮಚ, ಹುಣಸೇಹಣ್ಣು 1 ½ ಲಿಂಬೆ ಹಣ್ಣಿನ ಗಾತ್ರದಷ್ಟು, ಬೆಳ್ಳುಳ್ಳಿ ಎಸಳು 10 ( ಸಿಪ್ಪೆ ತೆಗೆದಿರಬೇಕು), ಶುಂಠಿ 1 ಇಂಚು, ಈರುಳ್ಳಿ ½ , ಅರಶಿನ 1 ಚಿಟಿಕೆ, ಕೊಬ್ಬರಿ ಎಣ್ಣೆ 4 ಚಮಚ, ಉಪ್ಪು.

ಮಾಡುವ ವಿಧಾನ : ಮೊದಲಿಗೆ ಒಂದು  ಬಾಣಲೆಯಲ್ಲಿ ಒಣಮೆಣಸು, ಕಾಳುಮೆಣಸು, ಜೀರಿಗೆ, ಮೆಂತೆ, ದನಿಯಾ ನ್ನು ಬೇರೆ ಬೇರೆಯಾಗಿ  ಹುರಿದುಕೊಳ್ಳಿ. ನಂತರ ಇವುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಬೆಳ್ಳುಳ್ಳಿ ಎಸಳು , ಶುಂಠಿ, ಈರುಳ್ಳಿ, ಅರಶಿನ, ಹುಣಸೇಹಣ್ಣು ಹಾಕಿ ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ. ಅದಕ್ಕೆ ರುಬ್ಬಿದ ಮಸಾಲೆ, ಉಪ್ಪು, ಹಾಕಿ ಚೆನ್ನಾಗಿ ಮಿಕ್ಸ್  ಮಾಡಿ ಕುದಿಸಿ. ನಂತರ ಅದಕ್ಕೆ ಕ್ಲೀನ್ ಮಾಡಿದ ಬಂಗಡೆ ಮೀನಿನ ತುಂಡುಗಳನ್ನು ಹಾಕಿ ಸಣ್ಣ ಉರಿಯಲು ಮಸಾಲೆ ಗಟ್ಟಿಯಾಗುವವರೆಗೂ ಕುದಿಸಿದರೆ ಬಂಗಡೆ ಮೀನಿನ ಪುಳಿಮುಂಚಿ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ