ಸವಿಯಾದ ತುಪ್ಪದ ಚಿರೋಟಿ ಮಾಡಿ ಸವಿಯಿರಿ

ಸೋಮವಾರ, 24 ಸೆಪ್ಟಂಬರ್ 2018 (17:01 IST)
ಚಿರೋಟಿ ಎಂದರೆ ಬಾಯಲ್ಲಿ ನೀರೂರುತ್ತದೆ ಅಲ್ಲವೇ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಹೇಗೆ ಅಂತ ನೋಡಿ.
 
ಬೇಕಾಗುವ ಸಾಮಗ್ರಿಗಳು :
ಮೈದಾ ಹಿಟ್ಟು 2 ಕಪ್
ತುಪ್ಪ
ಅಕ್ಕಿ ಹಿಟ್ಟು 2 ಟೀ ಸ್ಪೂನ್
ಸ್ವಲ್ಪ ನೀರು
ಏಲಕ್ಕಿ ಪುಡಿ
ಎಣ್ಣೆ
ಉಪ್ಪು
ಸಕ್ಕರೆ ಪುಡಿ
ಮಾಡುವ ವಿಧಾನ :
   ಮೊದಲು ಮೈದಾಹಿಟ್ಟು, ಅಕ್ಕಿಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ತುಪ್ಪವನ್ನು ಬಿಸಿ ಮಾಡಿ ಹಾಕಬೇಕು. ನಂತರ ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪುರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಒಂದು ಬೌಲ್‌ನಲ್ಲಿ ಸ್ವಲ್ಪ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಬೇಕು. ನಂತರ ಕಲೆಸಿದ ಮೈದಾ ಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಂಡು ಪುರಿಯಂತೆ ಲಟ್ಟಿಸಿಕೊಳ್ಳಬೇಕು. ನಂತರ ಸಕ್ಕರೆ ಪಾಕವನ್ನು ಮಾಡಿಕೊಳ್ಳಬೇಕು. ಅದಕ್ಕೆ ಏಲಕ್ಕಿಯನ್ನು ಕೂಡಾ ಹಾಕಬೇಕು. ಲಟ್ಟಿಸಿದ ಪುರಿಯ ಮೇಲೆ ಅಕ್ಕಿ ಹಿಟ್ಟು, ತುಪ್ಪದ ಮಿಶ್ರಣವನ್ನು ಸವರಿ ಇನ್ನೊಂದು ಪುರಿಯನ್ನಿಡಬೇಕು. 
 
ಹೀಗೆ 3 ಪುರಿಗಳನ್ನು ಒಂದರ ಮೇಲೊಂದು ಇಟ್ಟು ಅಕ್ಕಿ ಹಿಟ್ಟಿನ ಮಿಶ್ರಣ ಸವರಿ ಎಲ್ಲವನ್ನೂ ಸೇರಿಸಿ ಸುರುಳಿಯಾಗಿ ಮಡಚಬೇಕು. ಈಗ ಸುರುಳಿಯನ್ನು ಒಂದೇ ಅಳತೆಯ ಚಿಕ್ಕ ಭಾಗಗಳಾಗಿ ಕತ್ತರಿಸಿಕೊಳ್ಳಬೇಕು. ನಂತರ ಕತ್ತರಿಸಿಕೊಂಡ ಹಿಟ್ಟಿನ ಭಾಗಗಳನ್ನು ಹಾಗೆಯೇ ತಟ್ಟಿ ಪೂರಿಯಂತೆ ಲಟ್ಟಿಸಿಕೊಳ್ಳಬೇಕು. ನಂತರ ಹದವಾದ ಉರಿಯಲ್ಲಿ ಹೊಂಬಣ್ಣ ಬರುವಂತೆ ಡೀಪ್ ಫ್ರೈ ಮಾಡಿ ಪುರಿಯನ್ನು ಸಕ್ಕರೆ ಪಾಕದಲ್ಲಿ ಹಾಕಬೇಕು. ನಂತರ ಸ್ವಲ್ಪ ಹೊತ್ತಿನ ಬಳಿಕ ಅದನ್ನು ಬೇರೆ ತೆಗೆದಿರಿಸಿದರೆ ರುಚಿಯಾದ ಚಿರೋಟಿ ಸವಿಯಲು ಸಿದ್ಧ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ