ಮಾವಿನ ಕಾಯಿ ರಸಂ ಮಾಡಿ ರುಚಿ ನೋಡಿ

ಶನಿವಾರ, 28 ಜನವರಿ 2017 (11:34 IST)
ಬೆಂಗಳೂರು:  ಮಾವಿನ ಕಾಯಿ ಸೀಸನ್ ಬಂತು. ಮಾವಿನ ಕಾಯಿ ಬಳಸಿ ಏನೆಲ್ಲಾ ಅಡುಗೆ ಮಾಡಬಹುದು ಎಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ? ಒಂದು ಸಿಂಪಲ್ ರಸಂ ಹೇಳುತ್ತೇವೆ. ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಮಾವಿನ ಕಾಯಿ
ಹಸಿಮೆಣಸು
ಜೀರಿಗೆ ಉಪ್ಪು
ಕರಿಬೇವು

 
ಮಾಡುವ ವಿಧಾನ

ಮಾವಿನ ಕಾಯಿಯನ್ನು ಸಿಪ್ಪೆ ತೆಗೆಯದೇ ಇಡೀ ಬೇಯಿಸಿಕೊಳ್ಳಿ. ಬೆಂದ ಮೇಲೆ ಇದರ ಸಿಪ್ಪೆ ತೆಗೆದುಕೊಂಡು ಚೆನ್ನಾಗಿ ಕಿವುಚಿಕೊಳ್ಳಿ. ಸಂಪೂರ್ಣವಾಗಿ ಕರಗುವಷ್ಟು ಕಿವುಚಿಕೊಳ್ಳಿ. ಒಂದು ಪಾತ್ರೆಯಲ್ಲಿ ಈ ಕಿವುಚಿದ ರಸ ಹಾಕಿ ಅದಕ್ಕೆ ಸ್ವಲ್ಪ ಹಸಿಮೆಣಸು ನುರಿದುಕೊಳ್ಳಿ. ಇದಕ್ಕೆ ಬೇಕಾದಷ್ಟು ನೀರು, ಉಪ್ಪು ಹಾಕಿಕೊಳ್ಳಿ. ಜೀರಿಗೆ, ಕರಿಬೇವು ಒಗ್ಗರಣೆ ಹಾಕಿದರೆ ಮಾವಿನ ಕಾಯಿ ರಸಂ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ