'ಆಲೂಗಡ್ಡೆ ಬಜ್ಜಿ ’ ಮಾಡುವ ವಿಧಾನ

ಭಾನುವಾರ, 28 ಫೆಬ್ರವರಿ 2021 (19:28 IST)
ಬೆಂಗಳೂರು: ಸಂಜೆ ಸಮಯ ಸ್ನ್ಯಾಕ್ಸ್ ಇದ್ದರೆ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿದೆ ನೋಡಿ ರುಚಿಯಾದ ಆಲೂಗಡ್ಡೆ ಬಜ್ಜಿ.

ಬೇಕಾಗುವ ಸಾಮಗ್ರಿಗಳು :3- 4 –ಆಲೂಗಡ್ಡೆ,1 -ಬಟ್ಟಲು ಕಡಲೆ ಹಿಟ್ಟು,1 -ಚಮಚ ಖಾರದ ಪುಡಿ,1/2 -ಚಮಚ ಉಪ್ಪು.
1/2 - ಚಮಚ  ಸ್ವಲ್ಪ ಸೋಡಾಪುಡಿ.

ಮಾಡುವ ವಿಧಾನ :ಮೊದಲಿಗೆ 3-4  ಆಲೂಗಡ್ಡೆಯನ್ನು ತೊಳೆದು ವೃತ್ತಾಕಾರವಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಒಂದು ಪಾತ್ರೆಗೆ ಒಂದು ಬಟ್ಟಲು ಕಡಲೆ ಹಿಟ್ಟು, ಒಂದು ಚಮಚ ಖಾರದ ಪುಡಿ. ಅರ್ಧ ಚಮಚ ಉಪ್ಪು, ಅರ್ಧ ಚಮಚ ಓಂಕಾಳು, ಸ್ವಲ್ಪ ಸೋಡಾಪುಡಿ ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ ಆಲೂಗಡ್ಡೆ ಪೀಸುಗಳನ್ನು  ಅದರಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ ಗರಿಗರಿಯಾದ ರುಚಿಯಾದ ಆಲೂಗಡ್ಡೆ ಬಜ್ಜಿ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ