ಮನೆಯಲ್ಲಿ ಮಾಡಿ ಸವಿಯಿರಿ ಮೋತಿ ಚೂರು ಲಡ್ಡು

ಶುಕ್ರವಾರ, 20 ಜುಲೈ 2018 (16:25 IST)
ಬೆಂಗಳೂರು: ಮೋತಿ ಚೂರು ಲಡ್ಡು ಸವಿಯುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮನೆಯಲ್ಲಿಯೇ ಮಾಡಿ ಸವಿಯಬಹುದು. ಮಾಡುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ ನೋಡಿ.
 

ಬೇಕಾಗುವ ಪದಾರ್ಥಗಳು...
ಎಣ್ಣೆ- 1/3ಕಪ್
ಕೇಸರಿ - ಸ್ವಲ್ಪ
ಗೋಡಂಬಿ - ಸ್ವಲ್ಪ
ಪಿಸ್ತಾ - ಸ್ವಲ್ಪ
ಅಡುಗೆ ಸೋಡಾ - ಚಿಟಿಕೆಯಷ್ಟು
ಸಕ್ಕರೆ - 1/2 ಬಟ್ಟಲು
ಏಲಕ್ಕಿ ಪುಡಿ - 1/2 ಚಮಚ
ಕಡಲೆ ಹಿಟ್ಟು - 1/2 ಬಟ್ಟಲು

ಮಾಡುವ ವಿಧಾನ
ಒಂದು ಪಾತ್ರೆಗೆ ಕಡಲೆ ಹಿಟ್ಟು ಹಾಗೂ ಸ್ವಲ್ಪ ಕೇಸರಿ, ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಕಲಸಿರಿ.
ನಂತರ ಇದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು. ಎಣ್ಣೆ ಕಾದ ನಂತರ ಇದನ್ನು  ಸಣ್ಣ ಸಣ್ಣ ತೂತುಗಳಿರುವ ಜಾಲರಿಯಲ್ಲಿ ಹಾಕಿ ಬಾಣಲೆಗೆ ಹಾಕಬೇಕು.


ಹೊಂಬಣ್ಣಕ್ಕೆ ಬಂದಾಗ ತೆಗೆದು ಮತ್ತೊಂದು ಪಾತ್ರೆಯೊಂದಕ್ಕೆ ಹಾಕಿ.ಇನ್ನೊಂದು ಪಾತ್ರೆಯಲ್ಲಿ  ಸಕ್ಕರೆ ಹಾಗೂ ಸ್ವಲ್ಪ ನೀರು ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಬೇಕು. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಪಾಕ ತಣ್ಣಗಾಗಲು ಬಿಡಿ


ಕರಿದುಕೊಂಡ ಬೂಂದಿಗೆ ಪಿಸ್ತಾ, ಗೋಡಂಬಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಸಕ್ಕರೆ ಪಾಕವನ್ನು ಹಾಕಿ ಮಿಶ್ರಣ ಮಾಡಿ 15 ನಿಮಿಷ ನೆನೆಯಲು ಬಿಡಬೇಕು. ನಂತರ ಮೋತಿ ಚೂರುಗಳನ್ನು ಕೈಗೆ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿದರೆ ರುಚಿಕರ ಮೋತಿ ಚೂರು ಲಾಡು ಸವಿಯಲು ಸಿದ್ಧವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ