ಸಿಂಪಲ್ ರೆಸಿಪಿ ಸೋಯಾ ಚಿಕನ್ ..!!

ಬುಧವಾರ, 29 ಆಗಸ್ಟ್ 2018 (14:04 IST)
ಚಿಕನ್ ಬಳಸಿ ಹಲವಾರು ಪ್ರಕಾರದ ಅಡುಗೆಗಳನ್ನು ತಯಾರಿಸಬಹುದು. ಜಾಸ್ತಿ ಸಮಯ ಖರ್ಚು ಮಾಡದೇ ಮತ್ತು ಹೆಚ್ಚು ಪದಾರ್ಥಗಳಿಲ್ಲದೆ ಸುಲಭವಾಗಿ ರುಚಿಕರ ಸೋಯಾ ಚಿಕನ್ ಮಾಡುವುದು ಹೇಗೆ ಎಂದು ನೋಡೋಣ -
ಬೇಕಾಗುವ ಸಾಮಗ್ರಿಗಳು: 
 
ಚಿಕನ್ - 1/2 ಕೆಜಿ
ಸೋಯಾ ಸಾಸ್ - 5 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 3 ಚಮಚ
ಖಾರದ ಪುಡಿ - 3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - ಒಂದು ಚಿಟಿಕೆ
ಕರಿಬೇವಿನ ಎಲೆ - 2 ಚಮಚ
 
ಮಾಡುವ ವಿಧಾನ:
 
* ಒಂದು ಪಾತ್ರೆಯಲ್ಲಿ ಚಿಕನ್ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಖಾರದಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಒಂದು ಗಂಟೆಯ ಕಾಲ ಫ್ರಿಡ್ಜ್‍ನಲ್ಲಿಡಿ. ನಂತರ ಫ್ರಿಡ್ಜ್‍ನಿಂದ ತೆಗೆದು 10 ನಿಮಿಷ ರೂಂ ಟೆಂಪರೇಚರ್‍‌ನಲ್ಲಿಡಿ.
 
* ಒಂದು ಬಾಣಲೆಗೆ ಒಂದು ಚಿಟಿಕೆ ಸಕ್ಕರೆ ಹಾಕಿ ಬಾಡಿಸಿ. ಅದು ಕರಗಿದ ನಂತರ ನೆನೆಸಿದ ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
 
* ಇದಕ್ಕೆ ಎಣ್ಣೆ ಹಾಕುವ ಅವಶ್ಯಕತೆ ಇಲ್ಲ. ಬೇಕಾದಲ್ಲಿ ಸ್ವಲ್ಪ ನೀರು ಚುಮುಕಿಸಬಹುದು.
 
* ಆಗಾಗ ಕೈಯ್ಯಾಡಿಸುತ್ತಾ ಚಿಕನ್‍ನಲ್ಲಿ ಸಂಪೂರ್ಣವಾಗಿ ನೀರು ಇಂಗುವವೆರೂ ಫ್ರೈ ಮಾಡಿ, ಅದರ ಮೇಲೆ ಎಣ್ಣೆಯಲ್ಲಿ ಸ್ವಲ್ಪ ಹುರಿದ ಕರಿಬೇವಿನ ಎಲೆ ಉದುರಿಸಿದರೆ ಸಿಂಪಲ್ ಸೋಯಾ ಚಿಕನ್ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ