ಸಂಡೇ ಸ್ಪೆಷಲ್: ಮಂಗಳೂರಿನ ಕೋರಿ ಸುಕ್ಕಾ ಹೀಗೇ ಮಾಡಿ

Sampriya

ಭಾನುವಾರ, 31 ಮಾರ್ಚ್ 2024 (16:21 IST)
Photo Courtesy X
ಮಾಂಸ ಪ್ರಿಯರಿಗೆ ಕೋಳಿ ಅಂದರೆ ತುಂಬಾ ಇಷ್ಟಪಡುತ್ತಾರೆ. ಇನ್ನೂ ವಿಕೇಂಡ್‌ನಲ್ಲಿ ವಿಧ ವಿಧದಲ್ಲಿ ಅಡುಗೆ ಮಾಡಲು ಇಚ್ಛಿಸುವವರು ಸಿಂಪಲ್ ಆಗಿ ಚಿಕನ್ ಸುಕ್ಕಾ ರೆಸಿಪಿಯನ್ನು ಬೇಗನೇ ರೆಡಿ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು

ಚಿಕನ್ 1ಕೆಜಿ
ಬ್ಯಾಡಗಿ ಮೆಣಸು 10 ರಿಂದ 17
ಕೊತ್ತಂಬರಿ 3 ಚಮಚ
ಜೀರಿಗೆ 1 ಚಮಚ
ಸಾಸಿವೆ 1/2 ಚಮಚ
ಬೆಳ್ಳುಳ್ಳಿ 5 ರಿಂದ 6ಎಸಳು
ಲಿಂಬೆ ರಸ ಅಥವಾ ಹುಣಸೆ ರಸ ಸ್ವಲ್ವ
ತೆಂಗಿನ ಎಣ್ಣೆ
ಟೊಮೆಟೊ 1
ಒಂದು ಈರುಳ್ಳಿ ದೊಡ್ಡದು
ಉಪ್ಪು ರುಚಿಗೆ
ಕರಿಬೇವು
ತೆಂಗಿನ ಕಾಯಿ
ಅರಿಶಿನ

ಮಾಡುವ ವಿಧಾನ: ಬ್ಯಾಡಗಿ ಮೆಣಸನ್ನು ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ನಂತರ ಕೊತ್ತಂಬರಿ, ಜೀರಿಗೆ, ಸಾಸಿವೆಯನ್ನು ಹದ ಉರಿಯಲ್ಲಿ ಹುರಿಯಿರಿ. ಇದಕ್ಕೆ ಸ್ವಲ್ಪ ಕರಿಬೇವು ಹಾಕಿ. ನಂತರ ಈ ಮಿಶ್ರಣಕ್ಕೆ ಬೆಳ್ಳುಳ್ಳಿ ಹಾಕಿ ಮಿಕ್ಸ್‌ನಲ್ಲಿ ಪುಡಿ ಮಾಡಿಕೊಳ್ಳಿ.  ‌‌

ಇನ್ನೊಂದೆ ಬಾಣಲೆಯಲ್ಲಿ ತುರಿದ ತೆಂಗಿನ ಕಾಯಿಯನ್ನು ಹದ ಉರಿಯಲ್ಲಿ ಹುರಿಯಿರಿ. ಈ ವೇಳೆ ಸ್ವಲ್ಪ ಅರಿಶಿನಿ ಹಾಗೂ ಕರಿಬೇವನ್ನು ಹಾಕಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಸಣ್ಣದಾಗಿ ಹೆಚ್ಚಿದ ಈರುಳ್ಳಿ , ಕರಿಬೇವು, ಹಾಗೂ ಟೊಮೆಟೋವನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಅದಕ್ಕೆ ಸ್ವಲ್ಪ ಸ್ವಚ್ಛ ಮಾಡಿದ ಕೋಳಿ ಮಾಂಸವನ್ನು ಹದ ಉರಿಯಲ್ಲಿ ಬೇಯಿಸಿ. ಉಪ್ಪುನ್ನು ಸೇರಿಸಿ.


ಚಿಕನ್ ಬೆಂದ ನಂತರ ಮಸಾಲೆ ಮಿಶ್ರಣವನ್ನು ಹಾಕಿ. ಬೇಕಿದ್ದಲ್ಲಿ ನೀರನ್ನು ಸೇರಿಸಿ ಬೇಯಿಸಿ. ಮಸಾಲೆಯ ಹಸಿ ವಾಸನೆ ಹೋದ ನಂತರ ಅದಕ್ಕೆ ಹುರಿದಿಟ್ಟುಕೊಂಡಿರುವ ಹುರಿದ ತೆಂಗಿನ ಕಾಯಿಯನ್ನು ಸೇರಿಸಿ. ಇದೀಗ ರುಚಿಕರವಾದ ಚಿಕನ್ ಸುಕ್ಕಾ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ