ಅನ್ನ ಉಳಿದಿದ್ದರೆ ಹೀಗೆ ಸೆಂಡಿಗೆ ಮಾಡಿ

Krishnaveni K

ಶನಿವಾರ, 23 ಮಾರ್ಚ್ 2024 (12:14 IST)
Photo Courtesy: Twitter
ಬೆಂಗಳೂರು: ಬಹುತೇಕರಿಗೆ ರಾತ್ರಿ ಉಳಿದ ಅನ್ನವನ್ನು ಸುಮ್ಮನೇ ಚೆಲ್ಲಲು ಮನಸ್ಸಾಗುವುದಿಲ್ಲ. ಹಾಗಾಗಿ ಅದನ್ನು ಉಪಯೋಗಿಸಿಕೊಂಡು ಮಾಡಬಹುದಾದ ಸಿಂಪಲ್ ಸೆಂಡಿಗೆ ರೆಸಿಪಿ ಇಲ್ಲಿದೆ ನೋಡಿ.

ರಾತ್ರಿ ಉಳಿದ ಅನ್ನವನ್ನು ಸದುಪಯೋಗಪಡಿಸಿಕೊಳ್ಳಲು ಅನೇಕ ದಾರಿಗಳಿವೆ. ಅದರಲ್ಲಿ ಅನ್ನದ ಸೆಂಡಿಗೆ ಕೂಡಾ ಒಂದು. ರಾತ್ರಿ ಮಿಕ್ಕಿದ ಅನ್ನವನ್ನು ಏನು ಮಾಡುವುದು ಎಂದು ತಲೆಕೆಡಿಸಿಕೊಂಡಿದ್ದರೆ ಅದಕ್ಕೆ ನಾವು ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ವಸ್ತುಗಳನ್ನೇ ಸೇರಿಸಿಕೊಂಡು ಹೊಸ ರೆಸಿಪಿ ಮಾಡಬಹುದು.

ಇದಕ್ಕೆ ಬೇಕಾಗಿರುವ ಸಾಮಗ್ರಿ
ಉಳಿದಿರುವ ಅನ್ನ
ಎರಡು ಸ್ಪೂನ್ ಧನಿಯಾ ಕಾಳು
ಕೊಂಚ ಖಾರದ ಪುಡಿ
ಉಪ್ಪು
ಈರುಳ್ಳಿ/ ಬೆಳ್ಳುಳ್ಳಿ

ಮಾಡುವ ವಿಧಾನ
ಅನ್ನಕ್ಕೆ ಸ್ವಲ್ಪವೇ ಸ್ವಲ್ಪ ನೀರು ಚಿಮುಕಿಸಿಕೊಂಡು ಧನಿಯಾ, ಉಪ್ಪು, ಖಾರದಪುಡಿ ಮತ್ತು ಈರುಳ್ಳಿ ಅಥವಾ ಬೆಳ್ಳುಳ್ಳಿ ಸೇರಿಸಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ಹಿಟ್ಟು ದಪ್ಪಗೆ ಇರಬೇಕು. ತೆಳ್ಳಗಾಗದಂತೆ ಎಚ್ಚರಿಕೆ ವಹಿಸಿ. ಇದನ್ನು ಸೆಂಡಿಗೆಯಂತೆ ಒಂದು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಚ್ಚಿ ಬಿಸಿಲಿಗೆ ಒಣಗಲು ಬಿಡಿ. ಇದೇ ರೀತಿ ನಾಲ್ಕೈದು ದಿನ ಬಿಸಿಲಿಗೆ ಒಣ ಹಾಕಿದ ಮೇಲೆ ಎಣ್ಣೆಯಲ್ಲಿ ಸೆಂಡಿಗೆ ಕರಿದು ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ