ಸ್ವೀಟ್ ಕಾರ್ನ್ ಚಿತ್ರಾನ್ನ: ಸವಿಯಲು ರುಚಿಯೂ ಹೌದು, ಮಾಡಲು ಸುಲಭವೂ ಹೌದು

ಸೋಮವಾರ, 17 ಸೆಪ್ಟಂಬರ್ 2018 (19:05 IST)
ಸ್ವೀಟ್ ಕಾರ್ನ್ ಚಿತ್ರನ್ನವು ಬ್ಯಾಚುಲರ್ಸ್‌ಗೆ ಹೇಳಿ ಮಾಡಿಸಿದ ಪದಾರ್ಥ ಎಂದು ಹೇಳಬಹುದು. ಇದನ್ನು ದೀಢೀರ್ ಎಂದು ಮಾಡಬಹುದು. ಹಾಗಾದರೆ ಹೇಗೆ ಮಾಡುವುದೆಂದು ನೋಡೋಣ..
ಬೇಕಾಗುವ ಸಾಮಗ್ರಿಗಳು:
 
ಅಕ್ಕಿ 1 1/4 ಕಪ್
ಸ್ವೀಟ್ ಕಾರ್ನ್ 1 ಕಪ್
ನಿಂಬೆ ರಸ 1 ರಿಂದ 2 ಚಮಚ
ಎಣ್ಣೆ 3 ರಿಂದ 4 ಚಮಚ
ಹಸಿಮೆಣಸಿನಕಾಯಿ 2 ರಿಂದ 3
ಕರಿಬೇವು 1 ಎಸಳು
ಉದ್ದಿನಬೇಳೆ 1/2 ಚಮಚ
ಸಾಸಿವೆ 1/2 ಚಮಚ
ಅರಿಶಿನ ಪುಡಿ 1/4 ಚಮಚ
ಸಕ್ಕರೆ 1/2 ಚಮಚ
ತೆಂಗಿನತುರಿ 3 ಚಮಚ
ಕೊತ್ತಂಬರಿ ಸೊಪ್ಪು 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
 
ಮೊದಲು ಅನ್ನವನ್ನು ಮಾಡಿಕೊಳ್ಳಿ. ನಂತರ ಸ್ವೀಟ್ ಕಾರ್ನ್‌ಗೆ ಸ್ವಲ್ಪವೇ ಉಪ್ಪು ಹಾಕಿ ಬೇಯಿಸಿ ಬಸಿದುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಎಣ್ಮೆ ಕಾದ ನಂತರ ಉದ್ದಿನಬೇಳೆ, ಸಾಸಿವೆ ಹಾಕಿ ಚಿಟಪಟಾಯಿಸಿ. ನಂತರ ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಅರಿಶಿನ ಪುಡಿ ಹಾಕಿ ಬೇಯಿಸಿದ ಕಾರ್ನ್ ಹಾಕಿ ಸ್ವಲ್ಪ ಫ್ರೈ ಮಾಡಬೇಕು. ನಂತರ ಇದಕ್ಕೆ ತೆಂಗಿನತುರಿಯನ್ನು ಹಾಕಿ ಅರ್ಧ ನಿಮಿಷ ಫ್ರೈ ಮಾಡಿಕೊಂಡು ನಿಂಬೆ ರಸ, ಉಪ್ಪು ಹಾಕಿ ಮಿಕ್ಸ್ ಮಾಡಿ ಉರಿಯನ್ನು ಆರಿಸಬೇಕು. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಅನ್ನ ಹಾಕಿ ಕಲೆಸಿದರೆ ಸ್ವೀಟ್ ಕಾರ್ನ್ ರೈಸ್ಯ ಚಿತ್ರಾನ್ನ ಸವಿಯಲು ಸಿದ್ಧ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ