ಗೆಣಸಿನ ಹಲ್ವಾ

ಶನಿವಾರ, 15 ನವೆಂಬರ್ 2014 (16:45 IST)
ಬೇಕಾಗುವ ಸಾಮಗ್ರಿ- ಎರಡು ಬಟ್ಟಲು ಗೆಣಸು (ಸಿಪ್ಪೆ ತೆಗೆದು ಬೇಯಿಸಿದ್ದು), ಒಂದು ಬಟ್ಟಲು ಸಕ್ಕರೆ, ಒಂದುವರೆ ಬಟ್ಟಲು ಹಾಲು, ಒಂದುವರೆ ಬಟ್ಟಲು ಖೋವಾ, ಕಾಲು ಬಟ್ಟಲು ತುಪ್ಪ, ಗೋಡಂಬಿ, ದ್ರಾಕ್ಷಿ ಸ್ವಲ್ಪ. ಏಲಕ್ಕಿ ಪುಡಿ, ಕೇಸರಿ.
 
ಮಾಡುವ ವಿಧಾನ- ಬೇಯಿಸಿ ಸಿಪ್ಪೆ ತೆಗೆದ ಗೆಣಸನ್ನು ತುರಿದಿಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ತುರಿದ ಗೆಣಸನ್ನು ಅದರಲ್ಲಿ ಹಾಕಿ ಬೇಯಿಸಿ. ಗಟ್ಟಿಯಾಗುತ್ತಾ ಬಂದಾಗ ಅದಕ್ಕೆ ಸಕ್ಕರೆ, ಖೋವಾ ಸೇರಿಸಿ ಕಡಿಮೆ ಉರಿಯಲ್ಲಿ ಹದವಾಗಿ ಬೇಯಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿ. ತುಪ್ಪದಲ್ಲಿ ಕೆಂಬಣ್ಣಕ್ಕೆ ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿ. ಸ್ವಲ್ಪ ಹೊತ್ತು ಕಡಿಮೆ ಉರಿಯಲ್ಲಿ ಮಗುಚಿ ನಂತರ ಕೆಳಗಿಳಿಸಿ. ಗೆಣಸಿನ ಹಲ್ವಾ ರೆಡಿ.

ವೆಬ್ದುನಿಯಾವನ್ನು ಓದಿ