ಬೆಂಗಳೂರು : ಬೆಂಡೆ ಕಾಯಿಯನ್ನು ಪಲ್ಯ, ಸಾಂಬಾರ್ ಗೆ ಬಳಸುತ್ತಾರೆ. ಆದರೆ ಇದರಿಂದ ರುಚಿಕರವಾದ ಕುರ್ ಕುರೆಯನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : ಸಣ್ಣಗೆ ಉದ್ದವಾಗಿ ಕಟ್ ಮಾಡಿಕೊಂಡ ಬೆಂಡೆಕಾಯಿ 1 ಕಪ್, 1 ಕಪ್ ಕಡಲೆಹಿಟ್ಟು, 1 ಟೇಬಲ್ ಚಮಚ ಅಕ್ಕಿಹಿಟ್ಟು, ½ ಚಮಚ ಮಾವಿನ ಕಾಯಿ ಪೌಡರ್, 1 ಚಮಚ ಖಾರ ಪುಡಿ , ½ ಚಮಚ ಅರಶಿನ ಪುಡಿ, ½ ಚಮಚ ಜೀರಿಗೆ ಪುಡಿ, ಉಪ್ಪು, ಎಣ್ಣೆ.
ಮಾಡುವ ವಿಧಾನ : ಬೆಂಡೆಕಾಯಿ, ಮಾವಿನ ಕಾಯಿ ಪೌಡರ್, ಖಾರ ಪುಡಿ , ಅರಶಿನ, ಕಡಲೆಹಿಟ್ಟು, ಉಪ್ಪು, ಅಕ್ಕಿಹಿಟ್ಟು, ಜೀರಿಗೆ ಪುಡಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಕಾದ ಎಣ್ಣೆಯಲ್ಲಿ ಕರಿದರೆ ಬೆಂಡೆಕಾಯಿ ಕುರ್ ಕುರೆ ರೆಡಿ.