ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್: ಇರ್ಫಾನ್ ಪಠಾಣ್ ಭರ್ಜರಿ ಬ್ಯಾಟಿಂಗ್ ನಿಂದ ಗೆದ್ದ ಭಾರತ

ಬುಧವಾರ, 11 ಮಾರ್ಚ್ 2020 (09:10 IST)
ಮುಂಬೈ: ಇರ್ಫಾನ್ ಪಠಾಣ್ ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಪರಿಣಾಮ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಶ್ರೀಲಂಕಾ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದೆ.


ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ದಿಲ್ಶಾನ್ ನೇತೃತ್ವದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತ್ತು. ಭಾರತದ ಪರ ಮುನಾಫ್ ಪಟೇಲ್ ನಾಲ್ಕು ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ಸಚಿನ್ ತೆಂಡುಲ್ಕರ್ ಮತ್ತು ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಬೇಗನೇ ಔಟಾಗುವ ಮೂಲಕ ಆಘಾತ ನೀಡಿದರು. ಈ ಮೂವರ ಪತನದ ಬಳಿಕ ಮೊಹಮ್ಮದ್ ಕೈಫ್ ಸ್ಥಿರವಾಗಿ ನಿಂತು 46 ರನ್ ಗಳಿಸಿದರು.  ಆದರೆ ಕೊನೆಯಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ತಂಡವನ್ನು ಗೆಲುವಿನ ಹಳಿಗೆ ತಂದಿದ್ದು ಇರ್ಫಾನ್ ಪಠಾಣ್. ಬೌಂಡರಿಗಳ ಸುರಿಮಳೆಗೈದ ಇರ್ಫಾನ್ ಅಜೇಯ 57 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ