ಸೆಮೀಸ್ ಗೆ ಭಾರತ ಲಗ್ಗೆ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ವನಿತೆಯರು!
ಸೋಮವಾರ, 2 ಆಗಸ್ಟ್ 2021 (15:01 IST)
ಭಾರತ ವನಿತೆಯರ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಗೆ ಲಗ್ಗೆ ಹಾಕಿದ್ದು, ಇದೇ ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ ಇತಿಹಾಸ ನಿರ್ಮಿಸಿದೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಭಾರತ 1-0 ಗೋಲಿನಿಂದ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು.
ಪಂದ್ಯದ 22ನೇ ನಿಮಿಷದಲ್ಲಿ ಗುರ್ಜಿತ್ ಸಿಂಗ್ ಪೆನಾಲ್ಟಿ ಕಾರ್ನರ್ ನಲ್ಲಿ ಏಕೈಕ ಗೋಲು ಸಿಡಿಸಿ ಹೀರೊ ಎನಿಸಿಕೊಂಡರು. ಆಸ್ಟ್ರೇಲಿಯಾದ ಸತತ ದಾಳಿಯನ್ನು ಹತ್ತಿಕ್ಕಿದ ಭಾರತ ರಕ್ಷಣಾ ವಿಭಾಗದಲ್ಲಿ ಅದ್ಭುತ ಸಾಧನೆ ತೋರಿದ್ದರಿಂದ ಗಳಿಸಿದ ಏಕೈಕ ಗೋಲನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.