ಕೊನೆಯ ಪಂದ್ಯಕ್ಕೆ ಸಿದ್ಧರಾದ ಅಪ್ರತಿಮ ಟೆನಿಸಿಗ ಲಿಯಾಂಡರ್ ಪೇಸ್

ಗುರುವಾರ, 26 ಡಿಸೆಂಬರ್ 2019 (08:13 IST)
ನವದೆಹಲಿ: ತಮ್ಮ ಆಟದ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ ಭಾರತೀಯರ ಪೈಕಿ ಟೆನಿಸಿಗ ಲಿಯಾಂಡರ್ ಪೇಸ್ ಕೂಡಾ ಅಗ್ರ ಪಂಕ್ತಿಯಲ್ಲೇ ಕಾಣಿಸಿಕೊಳ್ಳುತ್ತಾರೆ.


ಟೆನಿಸ್ ಆಟವನ್ನು ಉತ್ಕಟವಾಗಿ ಪ್ರೀತಿಸಿ, ಅದರಲ್ಲೇ ಸಾಧನೆ ಮಾಡಿ, ಅದಕ್ಕೆಂದೇ ತನ್ನ ಜೀವನ ಮುಡಿಪಾಗಿಟ್ಟ ಅಪ್ರತಿಮ ಆಟಗಾರ ಈಗ ಕೊನೆಗೂ ನಿವೃತ್ತಿಗೆ ಸಿದ್ಧರಾಗುತ್ತಿದ್ದಾರೆ.

46 ವರ್ಷದ ಪೇಸ್ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, ಇದಕ್ಕೂ ಮೊದಲು ಮುಂದಿನ ವರ್ಷ ಅಂದರೆ 2020 ತನ್ನ ವೃತ್ತಿ ಜೀವನದ ಕೊನೆಯ ಆಟವಾಗಲಿದೆ ಎಂದು ಪೇಸ್ ಟ್ವಿಟರ್ ಮೂಲಕ ಘೋಷಣೆ ಮಾಡಿದ್ದಾರೆ. ಆ ಮೂಲಕ ಸುದೀರ್ಘ ವೃತ್ತಿ ಬದುಕಿಗೆ ಕೊನೆ ಹಾಡಲು ನಿರ್ಧರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ