ಕುಟುಂಬಸ್ಥರೊಂದಿಗೆ ಕಲಹ: ಸ್ಪಷ್ಟನೆ ನೀಡಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ಬುಧವಾರ, 21 ಅಕ್ಟೋಬರ್ 2020 (09:36 IST)
ಹೈದರಾಬಾದ್: ಒಲಿಂಪಿಕ್ಸ್ ತರಬೇತಿ ಶಿಬಿರ ಅರ್ಧಕ್ಕೇ ಬಿಟ್ಟು ಇದ್ದಕ್ಕಿದ್ದಂತೇ ಲಂಡನ್ ಗೆ ತೆರಳಿರುವ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತಮ್ಮ ಕುರಿತಾದ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.


ಸಿಂಧು ತನ್ನ ಪೋಷಕರೊಂದಿಗೆ ಜಗಳ ಮಾಡಿಕೊಂಡು ಲಂಡನ್ ಗೆ ಹೋಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಸಿಂಧು ‘ಹೈದರಾಬಾದ್ ನಲ್ಲಿ ನನ್ನ ತರಬೇತಿ ಸರಿಯಾಗಿ ನಡೆಯುತ್ತಿರಲಿಲ್ಲ. ಅದಕ್ಕೇ ಇಲ್ಲಿಗೆ ಬಂದಿದ್ದೇನಷ್ಟೇ. ನನ್ನ ಪೋಷಕರೊಂದಿಗೆ ಯಾವುದೇ ರೀತಿಯ ಜಗಳ ಮಾಡಿಕೊಂಡು ನಾನಿಲ್ಲಿಗೆ ಬಂದಿಲ್ಲ. ನನ್ನದು ಚಿಕ್ಕ ಚೊಕ್ಕ ಕುಟುಂಬ. ನಾನು ಪ್ರತಿನಿತ್ಯ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರು ಯಾವತ್ತೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ನನಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಪೋಷಕರೊಂದಿಗೆ ನಾನು ಯಾಕೆ ಜಗಳವಾಡಲಿ?’ ಎಂದು ಸಿಂಧು ಖಾರವಾಗಿ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ