ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಡನ್ ತಾರೆ ಪಿವಿ ಸಿಂಧು: ಫೋಟೋ ಇಲ್ಲಿದೆ
ರಾಜಸ್ಥಾನದ ಉದಯಪುರದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಕಾರ್ಯಕ್ರಮಗಳು ನಡೆದಿದೆ. ನಿನ್ನೆಯಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿತ್ತು. ಇಂದು ಮದುವೆ ಶಾಸ್ತ್ರಗಳು ನೆರವೇರಿದೆ.
ಈ ಮದುವೆಗೆ ಪ್ರಧಾನಿ ಮೋದಿಯಿಂದ ಹಿಡಿದು ಸಾಕಷ್ಟು ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಗಣ್ಯರಿಗಾಗಿ ಹೈದರಾಬಾದ್ ನಲ್ಲಿ ನವ ಜೋಡಿ ರಿಸೆಪ್ಷನ್ ಕೂಡಾ ಏರ್ಪಾಟು ಮಾಡಿದ್ದು ಸಾಕಷ್ಟು ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ.
ಉದ್ಯಮಿ ವೆಂಕಟ ದತ್ತ ಸಾಯಿ ಮತ್ತು ಪಿವಿ ಸಿಂಧು ಕುಟುಂಬಸ್ಥರು ಮೊದಲಿನಿಂದಲೇ ಪರಿಚಿತರು. ಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ. ಭಾರತದ ಹೆಮ್ಮೆಯಾಗಿರುವ ಪಿವಿ ಸಿಂಧು ಈ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.