ನವದೆಹಲಿ: ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಶೂಟರ್ ಸರಬ್ಜೋತ್ ಸಿಂಗ್ ಹರ್ಯಾಣ ಸರ್ಕಾರ ನೀಡಿದ ಉದ್ಯೋಗವನ್ನೇ ತಿರಸ್ಕರಿಸಿದ್ದಾರೆ.
ಸಾಮಾನ್ಯವಾಗಿ ಒಲಿಂಪಿಕ್ಸ್, ವಿಶ್ವಕಪ್ ವಿಜೇತ ಕ್ರೀಡಾಳುಗಳಿಗೆ ಸರ್ಕಾರದಿಂದ ಉದ್ಯೋಗ ನೀಡಿ ಸನ್ಮಾನಿಸಲಾಗುತ್ತದೆ. ಅದರಲ್ಲೂ ಕ್ರೀಡಾಳುಗಳಿಗೆ ಗೌರವ ನೀಡುವಲ್ಲಿ ಹರ್ಯಾಣ ಸರ್ಕಾರ ಯಾವತ್ತೂ ಮುಂದಿರುತ್ತದೆ. ಅದೇ ರೀತಿ ಸರಬ್ಜೋತ್ ಗೂ ಸೂಕ್ತ ಗೌರವ ನೀಡಲಾಗಿತ್ತು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಮನು ಭಾಕರ್ ಜೊತೆಗೆ ಕಂಚಿನ ಪದಕ ಗೆದ್ದಿದ್ದ ರಾಜ್ಯದ ಕುಡಿ ಸರಬ್ಜೋತ್ ಗೆ ಸನ್ಮಾನದ ಜೊತೆಗೆ ಸರ್ಕಾರೀ ಉದ್ಯೋಗವನ್ನೂ ನೀಡಲಾಗಿತ್ತು. ಆದರೆ ಸರಬ್ಜೋತ್ ಉದ್ಯೋಗನನ್ನು ತಿರಸ್ಕರಿಸಿದ್ದಾರೆ. ಉದ್ಯೋಗವೇನೋ ಚೆನ್ನಾಗಿತ್ತು. ಆದರೆ ನನಗೆ ಈಗ ಉದ್ಯೋಗ ಬೇಡ ಎಂದಿದ್ದಾರೆ.
ನಾನು ಶೂಟಿಂಗ್ ನಲ್ಲಿ ಇನ್ನಷ್ಟು ಸಾಧನೆ ಮಾಡಬೇಕಿದೆ. ಶೂಟಿಂಗ್ ಕಡೆಗೆ ಮತ್ತಷ್ಟು ಗಮನ ಕೇಂದ್ರೀಕರಿಸಿಬೇಕಿದೆ. ಸದ್ಯಕ್ಕೆ ಉದ್ಯೋಗಕ್ಕೆ ಸೇರಿಕೊಂಡರೆ ಶೂಟಿಂಗ್ ಕಡೆಗೆ ಗಮನ ಕೊಡಲು ಸಾಧ್ಯವಾಗದು. ಹೀಗಾಗಿ ಸದ್ಯಕ್ಕೆ ನನಗೆ ಉದ್ಯೋಗ ಬೇಡ ಎಂದು ಸರಬ್ಜೋತ್ ಸಿಂಗ್ ನಿರಾಕರಿಸಿದ್ದಾರೆ.