ವಿನೋದ್ ಕಾಂಬ್ಳಿ ಎನ್ನಲಾದ ತೂರಾಡುತ್ತಿದ್ದ ವಿಡಿಯೋ ವೈರಲ್: ಮನೆಗೆ ಭೇಟಿ ನೀಡಿದ ಸ್ನೇಹಿತರು ಹೇಳಿದ್ದೇನು

Sampriya

ಭಾನುವಾರ, 11 ಆಗಸ್ಟ್ 2024 (14:02 IST)
Photo Courtesy X
ಮುಂಬೈ: ಭಾರತದ ಮಾಜಿ ಕ್ರಿಕಟರ್ ವಿನೋದ್ ಕಾಂಬ್ಳಿ ಅವರು ಅನಾರೋಗ್ಯದಿಂದ ನಡೆಯಲಾಗದ ಸ್ಥಿತಿಯಲ್ಲಿರುವ ಅವರದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ಅವರ ಸ್ನೇಹಿತರು ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ಕಾಂಬ್ಳಿ ಅವರಿಗೆ ನಡೆಯಲು ಸಾಧ್ಯವಾಗದೆ ಬೇರೆಯವರ ಸಹಾಯದಲ್ಲಿ ನಡೆದಾಡುತ್ತಿರುವುದನ್ನು ಕಾಣಬಹುದು. ಭಾರತ ಖ್ಯಾತ ಕ್ರಿಕೆಟರ್ ಒಬ್ಬರನ್ನು ಈ ಪರಿಸ್ಥಿತಿಯಲ್ಲಿ ನೋಡಲು ತುಂಬಾನೇ ಕಷ್ಟವಾಗುತ್ತದೆ. ಅತಿಯಾದ ಮದ್ಯಪಾನ ಸೇವನೆ ಏನ್ ಬೇಕಾದ್ರು ಮಾಡಬಹುದು ಎಂದು ವಿಡಿಯೋವನ್ನು ವೈರಲ್ ಮಾಡಲಾಗಿತ್ತು.  ಇದರಿಂದ ಅಭಿಮಾನಿಗಳು ವಿನೋದ್‌ ಕಾಂಬ್ಳಿ ಅವರ ಪರಿಸ್ಥಿತಿಯನ್ನು ನೋಡಿ ಶಾಕ್‌ ಆಗಿದ್ದರು. ಇದೀಗ ಈ ಸಂಬಂಧ ಅವರ ಸ್ನೇಹಿತರು ಅವರೊಂದಿಗಿನ ಫೋಟೋ ಹಂಚಿ, ಕಾಂಬ್ಳಿ ಚೆನ್ನಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ನಾನು ಚೆನ್ನಾಗಿಯೇ ಇದ್ದೇನೆ ಮತ್ತು ಫಿಟ್ ಆಗಿದ್ದೇನೆ: ವಿನೋದ್ ಕಾಂಬ್ಳಿ ತಮ್ಮ ಆಪ್ತರಿಗೆ ಹೇಳಿದ್ದಾರೆ. ಅವರ ಸ್ನೇಹಿತರು ಕಾಂಬ್ಳಿ ಅವರನ್ನು ಭೇಟಿಯಾದ ವೇಳೆ ಉತ್ಸಾಹದಲ್ಲಿರುವುದನ್ನು ಅವರು ನೋಡಿದ್ದಾರೆ. ಕಾಂಬ್ಳಿ ಅವರು 'ಫಿಟ್ ಮತ್ತು ಫೈನ್' ಎಂದು ಅವರಿಗೆ ಭರವಸೆ ನೀಡಿತ್ತಿರುವುದನ್ನು ಕಾಣಬಹುದು.

ನನ್ನ ಆರೋಗ್ಯದಲ್ಲಿ ಯಾವುದೇ ತರಹದ ಸಮಸ್ಯೆಯಾಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಬರುವ ವಿಡಿಯೋವನ್ನು ನಂಬಬೇಡಿ ಎಂದು ತಮ್ಮ ಶಾಲಾ ಸಹಪಾಠಿ ರಿಕ್ಕಿ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನ ಅಂಪೈರ್ ಮಾರ್ಕಸ್‌ ಅವರ ಬಳಿ ಹೇಳುತ್ತಿರುವುದನ್ನು ನೋಡಬಹುದಾಗಿದೆ. ಇದರಿಂದ ವಿನೋದ್ ಲಾಂಬ್ಳಿ ಅವರ ಬಗ್ಗೆ ಹರಿದಾಡುತ್ತಿರುವ ಊಹಪೋಹ ಸುದ್ದಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ