154 ಕಿ.ಮೀ. ವೇಗದ ಬಂದ ಚೆಂಡಿಗೆ ಧೋನಿ ಬೌಲ್ಡ್:‌ ಉಮ್ರಾನ್‌ ಮಲಿಕ್‌ ಐಪಿಎಲ್ ದಾಖಲೆ!

ಸೋಮವಾರ, 2 ಮೇ 2022 (16:47 IST)
ಮಹೇಂದ್ರ ಸಿಂಗ್‌ ಧೋನಿ ನಾಯಕತ್ವಕ್ಕೆ ಮರಳುತ್ತಿದ್ದಂತೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗೆಲುವಿನ ಹಾದಿಗೆ ಮರಳಿದರೂ ಅವರನ್ನು ಬೌಲ್ಡ್‌ ಮಾಡಿದ ಉಮ್ರಾನ್‌ ಮಲಿಕ್‌ ದಾಖಲೆ ಬರೆದಿದ್ದಾರೆ.
ಹೌದು, ಭಾನುವಾರ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ವೇಗಿ ಉಮ್ರಾನ್‌ ಮಲಿಕ್‌ 154 ಕಿ.ಮೀ. ವೇಗದಲ್ಲಿ ಚೆಂಡು ಎಸೆದಿರುವುದು ಪ್ರಸಕ್ತ ಸಾಲಿನ ಐಪಿಎಲ್‌ ನಲ್ಲಿ ಅತೀ ವೇಗದ ಎಸೆತ ಎಂಬ ದಾಖಲೆಗೆ ಪಾತ್ರವಾಗಿದೆ.
99 ರನ್‌ ಗಳಿಸಿದ್ದ ರುತುರಾಜ್‌ ಗಾಯಕ್ವಾಡ್‌ ಔಟಾಗುತ್ತಿದ್ದಂತೆ ಕ್ರೀಸ್‌ ಗೆ ಇಳಿದ ನಾಯಕ ಧೋನಿ ಸಿಡಿಲಬ್ಬರದ ಬ್ಯಾಟಿಂಗ್‌ ಗೆ ಮುಂದಾದರು. 19ನೇ ಓವರ್‌ ನಲ್ಲಿ ದಾಳಿಗಿಳಿದ ಉಮ್ರಾನ್‌ ಮಲಿಕ್‌ 154 ಕಿ.ಮೀ. ವೇಗದಲ್ಲಿ ಎಸೆದ ಚೆಂಡು ಎದುರಿಸಲಾಗದೇ ಧೋನಿ ಬೌಲ್ಡ್‌ ಆದರು.
ಉಮ್ರಾನ್‌ ಮಲಿಕ್‌ ೧೫೪ ಕಿ.ಮೀ. ವೇಗದಲ್ಲಿ ಚೆಂಡು ಎಸೆದಿರುವುದು ಇದೇ ಮೊದಲಲ್ಲ. ಎರಡು ಬಾರಿ ಈ ದಾಖಲೆ ಬರೆದಿದ್ದು ಎರಡೂ ಬಾರಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬಂದಿರುವುದು ವಿಶೇಷ.
ಮೊದಲ ಬಾರಿ ಮಾರ್ಚ್‌ ನಲ್ಲಿ ಮೊದಲ ಮುಖಾಮುಖಿಯಲ್ಲಿ ಥುತುರಾಜ್‌ ಗಾಯಕ್ವಾಡ್‌ ಅವರನ್ನು ಔಟ್‌ ಮಾಡಲು 154 ಕಿ.ಮೀ. ವೇಗದಲ್ಲಿ ಬೌಲಿಂಗ್‌ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ