ಏಷ್ಯನ್ ಗೇಮ್ಸ್: ಭಾರತಕ್ಕೆ ಇಂದು ಮತ್ತೊಂದು ಐತಿಹಾಸಿಕ ಚಿನ್ನ

ಮಂಗಳವಾರ, 26 ಸೆಪ್ಟಂಬರ್ 2023 (17:09 IST)
Photo Courtesy: Twitter
ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಇಂದು ಒಂದು ಐತಿಹಾಸಿಕ ಚಿನ್ನ ಮತ್ತು ರಜತ ಪದಕ ಒಲಿದಿದೆ. ಕುದುರೆ ಸವಾರಿಯಲ್ಲಿ ಭಾರತ ತಂಡ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ.

ಕುದುರೆ ಸವಾರಿಯಲ್ಲಿ ಭಾರತದ ಅನುಷ್ ಅಗರ್ ವಾಲ, ಹೃದಯ ಛೆಡ್ಡಾ, ದಿವ್ಯ ಕೃತಿ ಸಿಂಗ್, ಸುದೀಪ್ತಿ ಹಜೇಲ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದು ಈ ಏಷ್ಯಾಡ್ ನಲ್ಲಿ ಭಾರತದ ಮೂರನೇ ಚಿನ್ನದ ಪದಕವಾಗಿದೆ. ಭಾರತೀಯ ಸವಾರರು ಒಟ್ಟು 209. 205 ಅಂಕ ಸಂಪಾದಿಸಿದದರು. ಇದು 41 ವರ್ಷಗಳ ಏಷ್ಯಾಡ್ ಇತಿಹಾಸದಲ್ಲೇ ಭಾರತಕ್ಕೆ ಕುದುರೆ ಸವಾರಿಯಲ್ಲಿ ಒಲಿಯುತ್ತಿರುವ ಮೊದಲ ಚಿನ್ನದ ಪದಕವಾಗಿದೆ.

ಇನ್ನು, ಡಿಂಗಿ ಐಎಲ್ ಸಿಎ4 ಸ್ಪರ್ಧೆಯಲ್ಲಿ 17 ವರ್ಷದ ನೇಹಾ ಠಾಕೂರ್ ಬೆಳ್ಳಿ ಪದಕ ಗೆದ್ದಿದ್ದಾರೆ. 11 ರೇಸ್ ಗಳಲ್ಲಿ ಒಟ್ಟು 27 ಅಂಕ ಸಂಪಾದಿಸಿದ ನೇಹಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ