19 ನೇ ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಚಿನ್ನ ಗೆದ್ದ ಭಾರತ

ಸೋಮವಾರ, 25 ಸೆಪ್ಟಂಬರ್ 2023 (09:10 IST)
Photo Courtesy: Twitter
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕ ಒಲಿದಿದೆ. ಪುರುಷರ 10 ಮೀ. ಏರ್ ರೈಫಲ್ ಟೀಂ ಈವೆಂಟ್ ನಲ್ಲಿ ಭಾರತೀಯರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರದ್ರಂಕ್ಷ್ ಭಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಚಿನ್ನದ ಪದಕದ ಖಾತೆ ತೆರೆದಿದ್ದಾರೆ. ಮೂವರೂ ಸೇರಿ 1893.7 ಅಂಕಗಳನ್ನು ಕಲೆ ಹಾಕಿದರು. ಈ ಮೂಲಕ ಈ ಮೊದಲು ಚೀನಾ ಮಾಡಿದ್ದ 1893.3 ಅಂಕಗಳ ದಾಖಲೆಯನ್ನು ಮುರಿದರು.

ಇನ್ನು, ರೋಯಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಒಲಿದಿದೆ. ಇಂದು ಪುರುಷರ ನಾಲ್ಕ ವಿಭಾಗದಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿತ್ 6.10.81 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚು ಗೆದ್ದಿದ್ದಾರೆ. ಇದರೊಂದಿಗೆ ಭಾರತ 3 ಕಂಚು 3 ರಜತ ಮತ್ತು ಒಂದು ಚಿನ್ನದ ಪದಕ ಗೆದ್ದುಕೊಂಡಂತಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ