ಈ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಆಸೆ ಚಿಗುರಿದೆ. ಎರ್ನಝರ್ ಅಕ್ಮತಲೆವ್ ವಿರುದ್ಧ 3-3 ಅಂತರದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದ ಭಜರಂಗ್ ಪೂನಿಯಾ ಇರಾನ್ ನ ಮೊರ್ಟೆಜಾ ಘಿಯಾಸಿ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದಿದ್ದಾರೆ.
ಸೆಮಿಫೈನಲ್ ನಲ್ಲಿ ಇಂದು ಅವರು ಹಾಜಿ ಅಲಿಯೆವ್ ವಿರುದ್ಧ ಸೆಣಸಲಿದ್ದು, ಈ ಪಂದ್ಯವನ್ನು ಗೆದ್ದರೆ ಬೆಳ್ಳಿ ಪದಕ ಖಾತ್ರಿಯಾಗಲಿದೆ. ಒಂದು ವೇಳೆ ಸೋತರೆ ಮತ್ತೆ ಕಂಚಿನ ಪದಕಕ್ಕಾಗಿ ಆಡಬೇಕಾಗುತ್ತದೆ.