ಲಂಡನ್ ಒಲಿಂಪಿಕ್ ಸಾಧನೆಯನ್ನು ಹಿಂದಿಕ್ಕುತ್ತಾ ಭಾರತ?

ಶುಕ್ರವಾರ, 6 ಆಗಸ್ಟ್ 2021 (09:40 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತ ಅತೀ ಹೆಚ್ಚು ಪದಕ ಗೆದ್ದಿದ್ದು 2012 ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ. ಈ ಬಾರಿ ಆ ಸಾಧನೆಯನ್ನು ಹಿಂದಿಕ್ಕುವ ಅವಕಾಶ ಭಾರತಕ್ಕಿದೆ.


2012 ರ ಒಲಿಂಪಿಕ್ಸ್ ನಲ್ಲಿ ಭಾರತ ಎರಡು ಬೆಳ್ಳಿ, ಒಂದು ಕಂಚು ಸೇರಿದಂತೆ ಒಟ್ಟು ಆರು ಪದಕ ಗೆದ್ದುಕೊಂಡಿತ್ತು. ಆ ಬಾರಿ ಒಟ್ಟು 83 ಅಥ್ಲೆಟ್ ಗಳು ಭಾರತವನ್ನು ಪ್ರತಿನಿಧಿಸಿದ್ದರು.ಆ ಬಾರಿ ಕುಸ್ತಿಯಲ್ಲಿ ಸುಶೀಲ್ ಕುಮಾರ್, ಶೂಟಿಂಗ್ ನಲ್ಲಿ ವಿಜಯ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಬ್ಯಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್, ಶೂಟಿಂಗ್ ನಲ್ಲಿ ಗಗನ್ ನಾರಂಗ್, ಬಾಕ್ಸಿಂಗ್ ನಲ್ಲಿ ಮೇರಿ ಕೋಮ್ ಮತ್ತು ಕುಸ್ತಿಯಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದುಕೊಂಡಿದ್ದರು.

ಈ ಬಾರಿ ಭಾರತ ಆರಂಭದ ದಿನವೇ ಪದಕ ಗೆದ್ದು ಶುಭಾರಂಭ ಮಾಡಿತ್ತು. ಈಗಾಗಲೇ 5 ಪದಕ ಗೆದ್ದುಕೊಂಡಿದೆ. ಇನ್ನು, ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಪಂದ್ಯದ ಮೇಲೆ ನಿರೀಕ್ಷೆಯಿದೆ. ಇದರಲ್ಲೂ ಪದಕ ಗೆದ್ದುಕೊಂಡರೆ ಭಾರತದ ಸಾಧನೆ ಈ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮವೆನಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ