ಈ ತಪ್ಪಿನಿಂದಲೇ ವಿನೇಶ್ ಫೋಗಟ್ ಚಿನ್ನದ ಪದಕದ ಕನಸು ನುಚ್ಚು ನೂರಾಗಿದ್ದು

Sampriya

ಗುರುವಾರ, 8 ಆಗಸ್ಟ್ 2024 (16:28 IST)
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಾಸ್ತಿ ಚರ್ಚೆಯಾಗುತ್ತಿರುವುದು ಒಲಿಂಪಿಕ್ಸ್‌ ಕುಸ್ತಿ ಸ್ಪರ್ಧೆಯಿಂದ ಅನರ್ಹರಾಗಿರುವ ವಿನೇಶ್ ಫೋಗಟ್ ಅವರ ತೂಕದ ವಿಚಾರ. ಬೆಳಿಗ್ಗೆ ಕ್ವಾಟರ್ ಪೈನಲ್ ಸ್ಪರ್ಧೆ ವೇಳೆ 49.9 ಕೆಜಿ ತೂಕದ ವಿನೇಶ್ ಫೋಗಟ್ ರಾತ್ರಿಯ ಹೊತ್ತಿಗೆ 2.7 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಹೆಚ್ಚಾಗಿದೆ. ಭಾರತೀಯ ಕುಸ್ತಿಪಟುವಿನ ತೂಕ ಹೆಚ್ಚಳದ ಹಿಂದಿನ ಕಾರಣಗಳು ಬಹಿರಂಗಗೊಂಡಿವೆ.

2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ಪಂದ್ಯಗಳ ಆರಂಭದ ದಿನ  ವಿನೇಶ್ ಫೋಗಟ್ 49.9 ಕೆಜಿ ತೂಕವನ್ನು ಹೊಂದಿದ್ದರು. ಅಂದು ಅವರು ಬ್ಯಾಕ್‌ ಟು ಬ್ಯಾಕ್ ಮೂರು ಪಂದ್ಯಗಳಲ್ಲಿ ಸೆಣಸಾಡಿ ಗೆಲುವು ಸಾಧಿಸಿ, ಫೈನಲ್‌ಗೆ ಪ್ರವೇಶಿಸಿದರು.

ಬೆಳಿಗ್ಗೆ 49.9 ಕೆಜಿ ತೂಕದ ಕುಸ್ತಿಪಟು ರಾತ್ರಿಯ ವೇಳೆಗೆ 2.7 ಕೆಜಿ ತೂಕವನ್ನು ಹೊಂದಿದ್ದು ಹೇಗೆ? ಮತ್ತು ಅದೂ ತಲಾ ಮೂರು ನಿಮಿಷಗಳ ಮೂರು ಕಠೋರ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿದ ನಂತರ?

ವಿನೇಶಾ ಫೋಗಟ್ ಅವರು ಸ್ಪರ್ಧೆಗೆ ತೆರಳುವ ಮುನ್ನಾ ಕಡಿಮೆ ಆಹಾರ ಮತ್ತು ನೀರಿನ ಬಳಕೆಯೊಂದಿಗೆ ಕಠಿಣ ವರ್ಕೌಟ್ ಮಾಡಿದ್ದರು. ಕುಸ್ತಿ ಪಂದ್ಯಗಳನ್ನು ನಡೆಸಲು ಆಕೆಗೆ ಸಾಕಷ್ಟು ಶಕ್ತಿಗಾಗಿ ನ್ಯೂಟ್ರಿಸಿಯನ್ ಪೂರಕ ಆಹಾರ ನೀಡಲಾಗುತ್ತದೆ. ಇದು ಆಕೆಯ ತೂಕದ ಮೇಲೆ ಪರಿಣಾಮ ಬಿದ್ದಿರಬಹುದು ಎಂದು ಹೇಳಲಾಗಿದೆ. ಆದರೆ ಇದನ್ನು ವರ್ಕೌಟ್ ಮೂಲಕ ಮತ್ತೇ ಇಳಿಸಲಾಗುತ್ತದೆ. ಆದರೆ ಈ ಲೆಕ್ಕಾಚಾರ ವಿನೇಶ್ ಫೋಗಟ್ ಅವರ ತೂಕದಲ್ಲಿ ವರ್ಕೌಟ್ ಆಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ