ರಿಯೊ 2016 : ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್ ಪದಕದ ಆಸೆ ಜೀವಂತ, ಕ್ವಾರ್ಟರ್ ಫೈನಲ್ ಪ್ರವೇಶ
ಮಂಗಳವಾರ, 16 ಆಗಸ್ಟ್ 2016 (10:35 IST)
ಬ್ಯಾಡ್ಮಿಂಟನ್ ಆಟಗಾರರಾದ ಪಿವಿ ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಪದಕದ ಆಸೆ ಜೀವಂತವಿರಿಸಿದ್ದಾರೆ. ಶ್ರೀಕಾಂತ್ ಡೆನ್ಮಾರ್ಕ್ ಜಾನ್ ಜಾರ್ಗನ್‌ಸನ್ ವಿರುದ್ಧ 16ನೇ ಸುತ್ತಿನಲ್ಲಿ ರೋಮಾಂಚಕಾರಿ ಜಯಗಳಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಎರಡು ಬಾರಿ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಪಿ.ವಿ. ಸಿಂಧು ಚೀನಾ ಟೈಪಿಯ ಟಾಯ್ ಜು ಯಿಂಗ್ ವಿರುದ್ಧ ನೇರ ಸೆಟ್‌ಗಳಲ್ಲಿ ಜಯಗಳಿಸುವ ಮೂಲಕ ಕೊನೆಯ ಎಂಟನೇ ಸುತ್ತಿಗೆ ಪ್ರವೇಶಿಸಿದರು.
21 ವರ್ಷದ ಹೈದರಾಬಾದ್ ಮಹಿಳೆ 8ನೇ ಸೀಡ್ ಟಾಯ್ ಅವರನ್ನು 21-13, 21-15 ರಿಂದ 40 ನಿಮಿಷಗಳ ಪ್ರೀಕ್ವಾರ್ಟರ್ ಫೈನಲ್ಸ್‌ನಲ್ಲಿ ಸೋಲಿಸಿದರು. ಅವರು ಮುಂದಿನ ಪಂದ್ಯವನ್ನು ವಿಶ್ವ ನಂ. 2 ವಾಂಗ್ ಯಿಹಾನ್ ವಿರುದ್ಧ ಆಡಲಿದ್ದು, ಅವರು ಕೂಡ ಹಾಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರಾಗಿದ್ದಾರೆ.
ಸಿಂಧು ಆರಂಭದಲ್ಲೇ 3-1ರಿಂದ ಮುನ್ನಡೆ ಸಾಧಿಸಿ, ಟಾಯ್ ಪುಟಿದೆದ್ದು 5-5ರಲ್ಲಿ ಸಮ ಮಾಡಿಕೊಂಡರು. ಸಿಂಧು ಬ್ರೇಕ್ ಸಮಯದಲ್ಲಿ 11-6ರಿಂದ ಮುನ್ನಡೆ ಸಾಧಿಸಿದರು. ಸಿಂಧು ವಿಡಿಯೊ ರೆಫರಲ್ ಒಂದರಲ್ಲಿ ಗೆದ್ದು 20-13ರಿಂದ ಗೇಮ್ ಪಾಯಿಂಟ್ ಮುಟ್ಟಿ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡರು. ಎರಡನೇ ಸೆಟ್ಟನ್ನು ಕೂಡ ಸಿಂಧು 21-15ರಿಂದ ಸೋಲಿಸುವ ಮೂಲಕ ಸುಲಭ ಜಯಗಳಿಸಿದರು. ಟಾಯ್ ಸಿಂಧು ಮೇಲೆ ಒತ್ತಡ ಹಾಕಲು ಯತ್ನಿಸಿದರೂ ಅಂತಿಮ ಸ್ಪರ್ಶ ನೀಡುವಲ್ಲಿ ವಿಫಲವಾಗಿ ಸೋಲಪ್ಪಿದರು.
ಶ್ರೀಕಾಂತ್ ಮತ್ತು ಜೋರ್ಗನ್‌ಸನ್ ನಡುವೆ ಕೂಡ ಹಣಾಹಣಿ ಹೋರಾಟ ನಡೆಯಿತು. ಶ್ರೀಕಾಂತ್ ಆರಂಭದಲ್ಲೇ ಮುನ್ನಡೆ ಗಳಿಸಿದರೂ ಜೋರ್ಗನ್‌ಸನ್ ಪುಟಿದೆದ್ದು, ಪಂದ್ಯದ ಬಹುತೇಕ ಭಾಗ ಹಣಾಹಣಿ ಹೋರಾಟ ನಡೆಸಿದರು.
2ನೇ ಗೇಮ್‌ನಲ್ಲಿ ಶ್ರೀಕಾಂತ್ ಆರಂಭದಲ್ಲೇ ಲೀಡ್ ಗಳಿಸಿದರೂ ಜೋರ್ಗನ್‌ಸನ್‌ಗೆ 5 ಸತತ ಪಾಯಿಂಟ್ ಬಿಟ್ಟುಕೊಟ್ಟಿದ್ದರಿಂದ 17-18ರಿಂದ ಹಿಂದುಳಿದರು.
ಆದರೆ ಜೋರ್ಗನ್‌ಸನ್ ಕೊನೆಯಲ್ಲಿ ಮೂರು ನೇರ ಪಾಯಿಂಟ್ ಕಳೆದುಕೊಂಡು ಎದುರಾಳಿಗೆ ಎರಡು ಗೇಮ್ ಪಾಯಿಂಟ್‌ಗಳನ್ನು ನೀಡಿದ್ದರಿಂದ ಶ್ರೀಕಾಂತ್ 21-19ರಿಂದ ಎರಡನೇ ಗೇಮ್ ಕೂಡ ಗೆದ್ದುಕೊಂಡರು. ಪಂದ್ಯ 42 ನಿಮಿಷಗಳ ಕಾಲ ನಡೆದು ಶ್ರೀಕಾಂತ್ ್ವರು ಚೀನಾದ ಲಿನ್ ಡಾನ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಎದುರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ