ರಿಯೊ ಒಲಿಂಪಿಕ್ಸ್ 2016: ರಷ್ಯಾಗೆ ಸಂಪೂರ್ಣ ನಿಷೇಧವಿಲ್ಲ

ಸೋಮವಾರ, 25 ಜುಲೈ 2016 (18:40 IST)
ರಿಯೊ ಒಲಿಂಪಿಕ್ಸ್‌ನಲ್ಲಿ ರಷ್ಯಾಗೆ ಸಂಪೂರ್ಣ ನಿಷೇಧವಿಲ್ಲ ಎಂದು ಐಒಸಿ ತಿಳಿಸಿದೆ.  ರಷ್ಯಾ ಸ್ಪರ್ಧಿಗಳು ನಿಷ್ಕಳಂಕಿತರಾಗಿದ್ದಲ್ಲಿ, ಅವರಿಗೆ ಅವಕಾಶ ನೀಡುವುದನ್ನು ನಿರ್ಧರಿಸಲು ವೈಯಕ್ತಿಕ ಕ್ರೀಡಾ ಆಡಳಿತ ಮಂಡಳಿಗೆ ಬಿಡಲಾಗಿದೆ.
 
ರಷ್ಯಾ ರಾಷ್ಟ್ರ ಪ್ರಾಯೋಜಿತ ಉದ್ದೀಪನ ಮದ್ದು ಸೇವನೆ ಕಾರ್ಯಕ್ರಮವನ್ನು 2012ರಿಂದ 2015ರವರೆಗೆ ನಿರ್ವಹಿಸಿದೆ ಎಂದು ಕೆನಡಾದ ಕಾನೂನು ಪ್ರಾಧ್ಯಾಪಕ ರಿಚರ್ಡ್ ಮೆಕ್‌ಲಾರೆನ್ ವರದಿ ನೀಡಿದ ಬಳಿಕ ರಷ್ಯಾಗೆ ಒಲಿಂಪಿಕ್ಸ್‌ನಿಂದ ಸಂಪೂರ್ಣ ನಿಷೇಧ ವಿಧಿಸಬೇಕೆಂಬ ಕೂಗು ಎದ್ದಿತ್ತು.
 
ಆದರೆ ಐಒಸಿ ಇದಕ್ಕೆ ಸಮ್ಮತಿಸದೇ ಸ್ವಚ್ಛ ಕ್ರೀಡಾಪಟುಗಳಿಗೆ  ಅವಕಾಶ ನೀಡುವ ದೃಷ್ಟಿಯಿಂದ ಐಒಸಿ ಮಂಡಿಸುವ ಕಠಿಣ ಮಾನದಂಡವನ್ನು ಪೂರೈಸಿದ ರಷ್ಯಾ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗುತ್ತದೆಂದು ತಿಳಿಸಿದೆ.
 
ಡೋಪಿಂಗ್ ನಿಷೇಧ ಶಿಕ್ಷೆಗೆ ಗುರಿಯಾದ ಯಾವುದೇ ರಷ್ಯನ್ನರಿಗೆ ಮಂದಿನ ತಿಂಗಳ ಒಲಿಂಪಿಕ್ಸ್‌ನಲ್ಲಿ ಅವಕಾಶ ನೀಡಲಾಗುವುದಿಲ್ಲ. ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳನ್ನು ಈಗಾಗಲೇ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ