ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಪಿ.ವಿ. ಸಿಂಧುಗೆ ಸೋಲು, ಶ್ರೀಕಾಂತ್ ಪದಕದ ಭರವಸೆ
ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಪ್ರಬಲ ಎದುರಾಳಿ ವಿಶ್ವ ನಂ.1 ತೈ ಝೂ ಯಿಂಗ್ ವಿರುದ್ಧ 17-21, 13-21 ಅಂತರದ ನೇರ ಸೆಟ್ ಗಳ ಸೋಲು ಅನುಭವಿಸಿದರು. ಇದರೊಂದಿಗೆ ಸಿಂಧು ಕನಸು ಭಗ್ನಗೊಂಡಿದೆ.
ಆದರೆ ಪುರುಷರ ವಿಭಾಗದಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಸೆಮಿಫೈನಲ್ ಗೇರಿದ್ದು, ಪದಕದ ಭರವಸೆ ನೀಡಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಕಾಲಿಜೋ ವಿರುದ್ಧ 21-8, 21-7 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಪುರುಷರ ವಿಭಾಗದಲ್ಲಿ ಪ್ರಕಾಶ್ ಪಡುಕೋಣೆ ಮತ್ತು ಸಾಯ್ ಪ್ರಣೀತ್ ನಂತರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆಲ್ಲುತ್ತಿರುವ ಮೂರನೇ ಭಾರತೀಯ ಪುರುಷ ಬ್ಯಾಡ್ಮಿಂಟನ್ ತಾರೆ ಎಂಬ ಗೌರವ ಅವರದ್ದಾಗಿದೆ.