ಧಾರವಾಹಿ ನಾಯಕನಾಗುತ್ತಿರುವ ನಟಿ ನೇಹಾ ಗೌಡ ಪತಿ ಚಂದನ್
ನೇಹಾ ಪತಿ ಚಂದನ್ ಈ ಮೊದಲು ಕಲರ್ಸ್ ವಾಹಿನಿಯ ರಾಜಾ ರಾಣಿ ಶೋನಲ್ಲಿ ಭಾಗಿಯಾಗಿದ್ದರಲ್ಲದೆ, ವಿಜೇತರಾಗಿದ್ದರು. ಇದಾದ ಬಳಿಕ ಡ್ಯಾನ್ಸ್ ಶೋನಲ್ಲೂ ಭಾಗಿಯಾಗಿದ್ದರು. ಆದರೆ ನಟನೆ ಅವರಿಗೆ ಹೊಸದು.
ಇದೀಗ ನೇಹಾ ಪತಿ ಚಂದನ್ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಅಂತರ್ಪಟ ಎನ್ನುವ ಧಾರವಾಹಿಗೆ ನಾಯಕರಾಗುತ್ತಿದ್ದಾರೆ. ಸ್ವಪ್ನ ಕೃಷ್ಣ ಅವರ ನಿರ್ಮಾಣ, ನಿರ್ದೇಶನದ ಧಾರವಾಹಿ ಇದಾಗಿದೆ. ಸದ್ಯದಲ್ಲೇ ಇದು ಪ್ರಸಾರ ಆರಂಭಿಸಲಿದೆ.