ತಿರುಪತಿಗೆ ಭೇಟಿ ನೀಡಲಿರುವ ದೇವೇಗೌಡ ಕುಟುಂಬ
ಗ್ರಹಣ ದೋಷ ಪರಿಹಾರಕ್ಕಾಗಿ ದೇವೇಗೌಡ ಕುಟುಂಬ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಲಿದೆ. ಇಂದು ವಿಶೇಷ ವಿಮಾನದಲ್ಲಿ ದೇವೇಗೌಡರ ಕುಟುಂಬ ತಿರುಪತಿಗೆ ತೆರಳಲಿದೆ.
ದೇವೇಗೌಡರ ಜತೆಗೆ ಸಚಿವ ಎಚ್ ಡಿ ರೇವಣ್ಣ, ಡಾ. ರಮೇಶ್, ಸೊಸೆಯಂದಿರು ಮತ್ತು ಮೊಮ್ಮಕ್ಕಳೂ ತಿರುಪತಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಶತಮಾನದ ಸುದೀರ್ಘ ಚಂದ್ರ ಗ್ರಹಣವಿದ್ದು, ಇದು ಕೆಲವು ನಕ್ಷತ್ರ, ರಾಶಿಯವರಿಗೆ ಹಾನಿ ಉಂಟುಮಾಡಲಿದೆ ಎಂಬ ನಂಬಿಕೆ ಕೆಲವರಲ್ಲಿದೆ.