ಆಗಸ್ಟ್ ತಿಂಗಳ ಹುಣ್ಣಿಮೆ ಚಂದ್ರನಿಗೆ ʼಸ್ಟರ್ಜಿಯಾನ್ ಮೂನ್ʼ ಎಂದು ಕರೆಯುವುದರ ಕಾರಣ
ಶುಕ್ರವಾರ, 27 ಆಗಸ್ಟ್ 2021 (13:06 IST)
ಈ ಬಾರಿ ಭಾನುವಾರ ಕಂಡುಬಂದ ಚಂದ್ರ, ಸಾಮಾನ್ಯವಾಗಿ ಕಂಡುಬರುವ ಹುಣ್ಣಿಮೆಯ ಚಂದ್ರ ಆಗಿರಲಿಲ್ಲ.
ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ, ಈ ಬಾರಿ ತನ್ನ ಕಾಂತಿಯ ಉತ್ತುಂಗ ತಲುಪಿದ್ದು ವಿಶೇಷ. ಹಾಗಾಗಿಯೇ ಅಮೆರಿಕ, ಯುರೋಪ್ ಬುಡಕಟ್ಟು ಜನರು, ವಿಶೇಷವಾದ ಈ ಚಂದ್ರನ ಗುರುತಿಸಲು sturgeon-moon'ಎಂದು ಹೆಸರಿಟ್ಟಿದ್ದಾರಂತೆ.
ಇದು ಒಂದು ಮೀನಿನ ತಳಿಯ ಹೆಸರಾಗಿದೆ. ಗ್ರೇಟ್ ಲೇಕ್ಸ್, ಲೇಕ್ ಚಾಂಪ್ಲೇನ್ನಲ್ಲಿ ಸಿಗುವ ಬೃಹತ್ ಗಾತ್ರದ ಮೀನು ಇದು. ಇದನ್ನು ಉತ್ತರ ಅಮೆರಿಕದ ನಿವಾಸಿಗಳು 'ಜೀವಂತ ಪಳೆಯುಳಿಕೆ' ಎಂದು ಕೂಡ ಕರೆಯುತ್ತಾರೆ.
ಈ ಮೀನು ಸುಮಾರು 150 ವರ್ಷಗಳವರೆಗೆ ಬದುಕುವ ಸಾಮರ್ಥ್ಯ ಹೊಂದಿದೆಯಂತೆ. ವಿಶ್ವದಲ್ಲಿ ಸ್ಟರ್ಜಿಯಾನ್ ಮೀನುಗಳ ಒಟ್ಟು 29 ತಳಿಗಳನ್ನು ಪತ್ತೆ ಮಾಡಲಾಗಿದೆ.