ಕುತ್ತಿಗೆ ಕಪ್ಪಗಿದೆ ಎಂಬ ಚಿಂತೆಯೇ? ಹಾಗಿದ್ದರೆ ಬೆಳ್ಳಗಾಗಿಸಲು ಇಲ್ಲಿದೆ ಟಿಪ್ಸ್

ಶುಕ್ರವಾರ, 16 ನವೆಂಬರ್ 2018 (08:55 IST)
ಬೆಂಗಳೂರು: ಸುಂದರ ನೀಳ ಕೊರಳು ಬೇಕೆಂಬುದು ಎಲ್ಲಾ ಹುಡುಗಿಯರ ಆಸೆ. ಆದರೆ ಕುತ್ತಿಗೆಯಲ್ಲಿ ಕಪ್ಪು ಕಲೆಗಳಿವೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

ಕಡಲೆ ಹಿಟ್ಟು: ಕಡಲೆ ಹಿಟ್ಟು ಹೊಳೆಯುವ ಚರ್ಮಕ್ಕೆ ಹೇಳಿ ಮಾಡಿಸಿದ ಮನೆ ಮದ್ದು. ಇದು ಚರ್ಮದ ಅಂಗಾಂಶಕ್ಕೆ ಹೊಸ ಚೈತನ್ಯ ನೀಡುವ ಶಕ್ತಿ ಹೊಂದಿದೆ. ಹೀಗಾಗಿ ಕಡಲೆಹಿಟ್ಟಿಗೆ ಸ್ವಲ್ಪ ರೋಸ್ ವಾಟರ್ ಮತ್ತು ಅರಶಿನ ಪುಡಿ ಹಾಕಿಕೊಂಡು ಪೇಸ್ಟ್ ಮಾಡಿ ಕಪ್ಪು ಕಲೆಗಳಿರುವ ಜಾಗಕ್ಕೆ ನಿಯಮಿತವಾಗಿ ಹಚ್ಚಿಕೊಳ್ಳಿ.

ಟೊಮೆಟೊ: ಆಂಟಿ ಆಕ್ಸಿಡೆಂಟ್ ಹೇರಳವಾಗಿರುವ ಟೊಮೆಟೋ ಚರ್ಮದ ಅಂಗಾಂಶಗಳನ್ನು ಚುರುಕುಗೊಳಿಸುತ್ತವೆ. ಹೀಗಾಗಿ ಟೊಮೆಟೋ ಪೇಸ್ಟ್ ಜತೆಗೆ ಸ್ವಲ್ಪ ಜೇನು ತುಪ್ಪ ಸೇರಿಸಿಕೊಂಡು ಕಪ್ಪಗಿರುವ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ನಂತರ ತಂಪು ನೀರಿನಿಂದ ತೊಳೆದುಕೊಳ್ಳಿ.

ಹಾಲು: ಕೆನೆ ರಹಿತ ಹಾಲನ್ನು ಹತ್ತಿಯಲ್ಲಿ ಅದ್ದಿ ತೆಳುವಾಗಿ ಕುತ್ತಿಗೆ ಭಾಗಕ್ಕೆ ಲೇಪಿಸಿಕೊಳ್ಳಿ. ಇದು ಸಂಪೂರ್ಣವಾಗಿ ಒಣಗಿದ ಬಳಿಕ ತಂಪು ನೀರಿನಿಂದ ತೊಳೆದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ