ಹೆಣ್ಣು ಮಕ್ಕಳು ಸಮಸ್ಯೆಯಿಂದ ದೂರವಾಗಲು ಇವೆಲ್ಲ ಮಾಡಲೇ ಬೇಕು

ಶುಕ್ರವಾರ, 31 ಜನವರಿ 2014 (10:39 IST)
PR
ಹೆಣ್ಣು ಮಕ್ಕಳು ಮುಟ್ಟು ಆಗುವುದಕ್ಕೆ ಮುಂಚೆ ಮತ್ತು ಆದಾಗ ಅನೇಕ ಬಗೆಯ ಕಿರಿಕಿರಿಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಕೋಪ, ಬೇಸರ, ಕಿರಿಕಿರಿ, ಅಸಹನೆ ಹೀಗೆ ಪಟ್ಟಿ ದೊಡ್ಡದಾಗುತ್ತಾ ಸಾಗುತ್ತದೆ. ಇವುಗಳ ಬಗ್ಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಪ್ರಮಾಣ ಅಧಿಕವಾಗುತ್ತದೆ ಎನ್ನುವುದನ್ನು ವಿವರಿಸಿ ಹೇಳ ಬೇಕಿಲ್ಲ.

ಇಂತಹ ಸಮಸ್ಯೆಗಳಿಂದ ಬಿಡುಗಡೆ ಹೊಂದಲು ಕೆಲವೊಂದು ಅಂಶಗಳಿಗೆ ಆದ್ಯತೆ ನೀಡುವುದು ಅತ್ಯವಶ್ಯಕ.

ಮುಖ್ಯವಾಗಿ ಆಹಾರದಲ್ಲಿ ಸಾಕಷ್ಟು ಮಾರ್ಪಾಟು ಮಾಡಿಕೊಳ್ಳುವುದು ಅತ್ಯಗತ್ಯ. ಅಲ್ಲದೆ, ಮುಖ್ಯವಾಗಿ ಕೆಲವು ಬಗೆಯ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡ ಬೇಕು ಎನ್ನುವ ಸಂಗತಿ ಹೇಳಿದ್ದಾರೆ.
ಕ್ಯಾಲ್ಸಿಯಂ ಅಧಿಕವಾಗಿ ಇರುವ ಉತ್ಪನ್ನಗಳನ್ನು ಸೇವಿಸ ಬೇಕು. ಹಾಲು, ಹಾಲಿನ ಉತ್ಪನ್ನಗಳಿಂದ ನೈಜವಾದ ಕ್ಯಾಲ್ಸಿಯಂ ದೇಹಕ್ಕೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ದೊರಕುತ್ತದೆ.

*ಬಿ6ವಿಟಮಿನ್ ಅಧಿಕ ಪ್ರಮಾಣದಲ್ಲಿ ಇರುವ ಆಹಾರ ಪದಾರ್ಥಗಳ ಬಳಕೆ ಮಾಡ ಬೇಕು. ಸೊಪ್ಪು-ತರಕಾರಿ, ಕಾಳು-ಬೇಳೆಗಳನ್ನು ಸೇವಿಸ ಬೇಕು.

*ಆಹಾರದಲ್ಲಿ ಉಪ್ಪಿನ ಪ್ರಮಾಣ , ತುಪ್ಪ, ಎಣ್ಣೆ , ಕಾರ್ಬೊ ಹೈಡ್ರೇಟ್ ಕೋಲ್ಡ್ ಡ್ರಿಂಕ್ಸ್, ಕಾಫಿ, ಟೀಯಂತಹ ಪಾನೀಯಗಳನ್ನು ಸೇವಿಸಲೇ ಬಾರದು. ಮೇಲೆ ತಿಳಿಸಿರುವ ಅಂಶಗಳಿಗೆ ಆದ್ಯತೆ ನೀಡಿದ್ದಾರೆ ನೀವು ಅನುಭವಿಸುವ ಕಿರಿಕಿರಿಯಿಂದ ಮುಕ್ತರಾಗ ಬಹುದು ಎನ್ನುತ್ತಾರೆ ತಜ್ಞ ವೈದ್ಯರು.

ವೆಬ್ದುನಿಯಾವನ್ನು ಓದಿ