ಮೊಟ್ಟೆ ಮಸಾಲಾ

ಬೇಕಾಗುವ ಸಾಮಾಗ್ರಿಗಳು:

ಮೊಟ್ಟೆ - 2-3
ನೀರುಳ್ಳಿ - 2
ಟೊಮ್ಯಾಟೋ - 2
ಜೀರಿಗೆ - ಅರ್ಧ ಚಮಚ
ಬೆಳ್ಳುಳ್ಳಿ
ಎಣ್ಣೆ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು
ಗರಂ ಮಸಾಲಾ ಪುಡಿ
ಕೆಪು ಮೆಣಸಿನ ಪುಡಿ

ಪಾಕ ವಿಧಾನ:

ಮೊಟ್ಟೆಯನ್ನು ಬೇಯಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿರಿ. ಬಾಣಲೆಯನ್ನು ಎಣ್ಣೆ ಬಿಸಿ ಮಾಡಿ ಇದಕ್ಕೆ ಸಣ್ಣಗೆ ಬಹೆಚ್ಚಿದ ನೀರುಳ್ಳಿ, ಟೊಮ್ಯಾಟೋ, ಬೆಳ್ಳುಳ್ಳಿ ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಇದಕ್ಕೆ ಗರಂ ಮಸಾಲಾ, ಕೆಂಪುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಮೊಟ್ಟೆ ಸೇರಿಸಿ ಎರಡು ನಿಮಿಷ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.

ವೆಬ್ದುನಿಯಾವನ್ನು ಓದಿ