ಚಿಕನ್ ಖೀಮಾ ಕರ್ರಿ

ಬೇಕಾಗುವ ಸಾಮಾನುಗಳು

1/2 ಕೆಜಿ ಮಾಂಸದ ಚೂರುಗಳು4 ಟೇಬಲ್ ಚಮಚೆ ಎಣ್ಣೆಸಂಬಾರ ಪದಾರ್ಥಗಳು:1 ಕಡ್ಡಿ ದಾಲ್ಚೀನಿ 2 ಏಲಕ್ಕಿ 2 ಲವಂಗಗಳು 1 ಮಧ್ಯಮ ಗಾತ್ರದ ಈರುಳ್ಳಿ, ಕೊಚ್ಚಿದ್ದು 1 ಟೀ ಚಮಚೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್1 ಟೀ ಚಮಚೆ ಜೀರಿಗೆ ಪುಡಿ 1 ಟೀ ಚಮಚೆ ಜೀರಿಗೆ ಪುಡಿ4 ಟೀ ಚಮಚೆ ಮೆಣಸಿನ ಪುಡಿ 4 ತೆಂಗಿನ ಚೂರುಗಳು,ಪೇಸ್ಟ್ ಆಗಿ ಅರೆದದ್ದು 4 ಮದ್ಯಮಗಾತ್ರದ ಟೊಮೆಟೋಗಳು, ಪೇಸ್ಟ್ ಆಗಿ ಅರೆದದ್ದುಒಂದು ಬಟ್ಟಲು ನೀರು1ಸಣ್ಣ ಎಲೆಕೋಸು4 ಟೀ ಚಮಚೆ

ತಯಾರಿಸುವ ವಿಧಾನ
ಸಂಬಾರ ಪದಾರ್ಥಗಳನ್ನು 4 ಚಮಚ ಎಣ್ಣೆ ಉಪಯೋಗಿಸಿ ತೆಳು ಕಂದು ಬಣ್ಣ ಬರೋ ತನಕ ಪ್ರೆಶರ್ ಕುಕ್ಕರ್‌ನಲ್ಲಿಟ್ಟು ಹುರಿಯಬೇಕು. ಕಂದು ಬಣ್ಮ ಬಂದ ನಂತರ ಈರುಳ್ಳಿ ಪೇಸ್ಟ್‌ನ್ನೂ ಸೇರಿಸಿ ಪುನಃ ಒಂದು ನಿಮಿಷ ಹುರಿಯಬೇಕು.ಮುಂದಿನ ಹಂತವಾಗಿ, ಪೇಸ್ಟ್ ಮಾಡಿದ ಶುಂಠಿ ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಕದಡಬೇಕು.ಆನಂತರ ಪೇಸ್ಟ್ ಮಾಡಿದ ಜೀರಿಗೆ ಪುಡಿ,ಅರಸಿನ ಪುಡಿ, ಮೆಣಸಿನ ಪುಡಿ ಹಾಗೂ ತೆಂಗಿನ ತುರಿಯ ಪೇಸ್ಟ್ ಮಿಕ್ಸ್ ಮಾಡಿ ಪುನಃ ಒಂದು ನಿಮಿಷಗಳಷ್ಟು ಕಾಲ ಕಲಕಬೇಕು.ನಂತರದಲ್ಲಿ ರೆಡಿ ಮಾಡಿಟ್ಟ ಟೊಮೆಟೋವನ್ನೂ ಕಲಕಬೇಕು.ಮುಂದಿನ ಹಂತದಲ್ಲಿ ಹಸಿಮಾಂಸದ ಚೂರು, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಬೇಕು. ಒಮ್ಮೆ ಕುಕ್ಕರ್ ಮುಚ್ಚಳ ತೆಗೆದು ಎಲೆಕೋಸು ಸೇರಿಸಿ ಪುನಃ ಇನ್ನೊಂದು ನಿಮಿಷ ಬೇಯಿಸಬೇಕು.ಮುಚ್ಚಳ ತೆಗೆದರೆ ಕೀಮಾ ಎಲೆಕೋಸು ಪಲ್ಯ ರೆಡಿ! ಈಗ ಅನ್ನ, ಚಪಾತಿಗಳಂತಹ ತಿಂಡಿಯೊಂದಿಗೆ ಸೇರಿಸಿ ತಿಂದಲ್ಲಿ ಸೊಗಸಾದ ಭೋಜನ ನಿಮ್ಮದಾಗುವುದು!. ನಿಮ್ಮ ಗಮನಕ್ಕೆ: ಎಲೆಕೋಸು ಬದಲಿಗೆ ಕ್ಯಾರೆಟ್ ,ಬಟಾಣಿಯಂತಹ ಯಾವುದೇ ತರಕಾರಿಯನ್ನು ಬಳಸಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ